Breaking
22 Mar 2026, Sun

ಮಸೀದಿ ಆವರಣದಲ್ಲಿ ನಿಲ್ಲಿಸಿದ್ದ ಕಾರು ಬೆಂಕಿಗಾಹುತಿ: ದಾಖಲೆಗಳು ಸುಟ್ಟು ಕರಕಲು

ಕಾಸರಗೋಡು: ನಿಲ್ಲಿಸಿದ್ದ ಕಾರೊಂದು ಬೆಂಕಿಗಾಹುತಿಯಾದ ಘಟನೆ ನೆಲ್ಲಿಕಟ್ಟೆ ಸಮೀಪದ ಪೈಕ ಎಂಬಲ್ಲಿ ಜು.30ರಂದು ನಡೆದಿದೆ.

ಮುಂಜಾನೆ ಮೂರುಗಂಟೆಯ ವೇಳೆ ಈ ಅವಘಡ ನಡೆದಿದೆ ಎಂದು ತಿಳಿದುಬಂದಿದೆ.

ಘಟನೆಯಲ್ಲಿ ಕಾರು ಸಂಪೂರ್ಣವಾಗಿ ಹೊತ್ತಿ ಉರಿದಿದ್ದು,ಕಾರಿನಲ್ಲಿದ್ದ ಪಾಸ್ ಫೋರ್ಟ್ ಸೇರಿದಂತೆ , ಇತರ ದಾಖಲೆಗಳು ಬೆಂಕಿಗಾಹುತಿಯಾಗಿದೆ. ಇದೇ ವೇಳೆ ಸಮೀಪದಲ್ಲಿದ್ದ ಶಾಲಾ ಬಸ್ಸು, ಸ್ಕೂಟರ್ ಗೂ ಬೆಂಕಿ ತಗುಲಿ ಹಾನಿ ಉಂಟಾಗಿದೆ.

ತಕ್ಷಣವೇ ಘಟನಾಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದ್ದಾರೆ.

Leave a Reply

Your email address will not be published. Required fields are marked *