Breaking
6 May 2026, Wed

ಧರ್ಮಸ್ಥಳದಲ್ಲಿ ಶವ ಹೊತ್ತಿಟ್ಟ ಪ್ರಕರಣ: ಪತ್ತೆಯಾದ ಪ್ಯಾನ್ ಕಾರ್ಡ್ ಬಗ್ಗೆ ಮಾಹಿತಿ ಕಲೆ ಹಾಕಿದ ಎಸ್ಐಟಿ ಅಧಿಕಾರಿಗಳು

ಧರ್ಮಸ್ಥಳ: ಗ್ರಾಮದಲ್ಲಿ ಶವ ಹೊತಿಟ್ಟ ಪ್ರಕರಣದಕ್ಕೆ ಸಂಬಂಧಪಟ್ಟಂತೆ ಮುಸುಕುಧಾರಿ ವ್ಯಕ್ತಿ ಗುರುತಿಸಿದ ಜಾಗದಲ್ಲಿ ಪತ್ತೆಯಾಗಿದ್ದ ಪ್ಯಾನ್ ಕಾರ್ಡ್ ನ ಬಗ್ಗೆ ಎಸ್ಐಟಿಯ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ.

ಈ ಕುರಿತು ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು ಅದು 2025ರಲ್ಲಿ ಸತ್ತ ಪುರುಷನ ಪ್ಯಾನ್ ಕಾರ್ಡ್ ಆಗಿದ್ದು, ಆತ ತನ್ನ ಹಳ್ಳಿಯ ಮನೆಯಲ್ಲಿ ಜಾಂಡೀಸ್ ಕಾಯಿಲೆಯಿಂದ ಮೃತನಾಗಿದ್ದಾನೆ ಎಂದು ತಿಳಿದು ಬಂದಿದೆ.

ಎಸ್ಐಟಿ ಅಧಿಕಾರಿಗಳು ಮೃತ ವ್ಯಕ್ತಿಯ ತಂದೆಯನ್ನು ಸಂಪರ್ಕಿಸಿದಾಗ ಮಾಹಿತಿ ಸಿಕ್ಕಿರುವುದಾಗಿ ಎಸ್. ಐ. ಟಿ ಯ ಉನ್ನತ ಮೂಲಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದೆ.

Leave a Reply

Your email address will not be published. Required fields are marked *