ಕೇರಳ: ಗರ್ಭಿಣಿ ಮಹಿಳೆಯೊಬ್ಬಳು ಪತಿಯ ಮನೆಯಲ್ಲೇ ಶರಣಾಗಿರುವ ಘಟನೆ ಕೇರಳದ ತ್ರಿಶೂರ್ ಜಿಲ್ಲೆಯ ವೆಲ್ಲಂಗುಲರ್ನಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಫಸೀಲಾ (23) ಎಂದು ಗುರುತಿಸಲಾಗಿದೆ.
ಜುಲೈ 29 ರಂದು ಫಸೀಲಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪ್ರಕರಣ ಸಂಬಂಧ ಮೃತಳ ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಫಸೀಲಾ ಪತಿ ನೌಫಲ್ ಮತ್ತು ಅತ್ತೆ ರಮ್ಲಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಇನ್ನು ಇತ್ತ ಫಸೀಲಾ ಸಾಯವುದಕ್ಕೂ ಮುನ್ನ ತನ್ನ ಮೊಬೈಲ್ನಲ್ಲಿ ಮನೆಯವರಿಗೆ ಮೆಸೇಜ್ ಮಾಡಿದ್ದು, ಕೌಟುಂಬಿಕ ದೌರ್ಜನ್ಯದಿಂದ ಅವರು ಕಷ್ಟ ಅನುಭವಿಸುತ್ತಿದ್ದರು ಅನ್ನುವ ವಿಚಾರ ಮೆಸೇಜ್ ನಲ್ಲಿ ಗೊತ್ತಾಗಿದೆ.
ಫಸೀಲಾ ಅವರಿಗೆ ಒಬ್ಬ ಮಗನಿದ್ದಾನೆ. ಇರಿಂಜಲಕುಡ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.



