Breaking
2 Nov 2026, Mon

ಆಲದಪದವು ಗೋಪಾಲ ಅಂಚನ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ: ಹೃದಯಾಂತರಾಳದ ಅಭಿನಂದನೆಗಳು

ಸೃಜನಶೀಲ ಕಲಾವಿದ, ಉದಯೋನ್ಮುಖ ಸಾಹಿತಿ, ಹಿರಿಯ ಪತ್ರಕರ್ತ, ಜನಪದ ಅಧ್ಯಯನಕಾರ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಘಟಕ ಮತ್ತು ರಾಜ್ಯಮಟ್ಟದ ತರಬೇತುದಾರರಾಗಿ ಗುರುತಿಸಿಕೊಂಡಿರುವ ಶ್ರೀ ಆಲದಪದವು ಗೋಪಾಲ ಅಂಚನ್ ಅವರು ಕರ್ನಾಟಕ ಸರಕಾರದ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವುದು ಹೆಮ್ಮೆಯ ಹಾಗೂ ಸಂತಸದ ಸಂಗತಿಯಾಗಿದೆ.

ಕಲೆ, ಸಾಹಿತ್ಯ, ಪತ್ರಿಕೋದ್ಯಮ, ಜನಪದ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಿಗೆ ನೀಡಿದ ಅಮೂಲ್ಯ ಕೊಡುಗೆ ಹಾಗೂ ನಿರಂತರ ಸೇವೆಯನ್ನು ಗುರುತಿಸಿ ದೊರೆತ ಈ ಗೌರವಕ್ಕೆ ಅವರಿಗೆ ಹೃದಯಾಂತರಾಳದ ಅಭಿನಂದನೆಗಳು.

ಮುಂದಿನ ದಿನಗಳಲ್ಲಿಯೂ ತಮ್ಮ ಸೃಜನಶೀಲ ಚಟುವಟಿಕೆಗಳ ಮೂಲಕ ಇನ್ನಷ್ಟು ಸಾಧನೆಗಳನ್ನು ಮಾಡುತ್ತಾ, ಸಮಾಜಕ್ಕೆ ಉತ್ತಮ ಕೊಡುಗೆ ನೀಡಲಿ. ಅವರ ಭವಿಷ್ಯ ಮತ್ತಷ್ಟು ಉಜ್ವಲವಾಗಲಿ ಹಾಗೂ ಇನ್ನೂ ಅನೇಕ ಗೌರವಗಳು ಅವರನ್ನು ಅರಸಿ ಬರಲಿ ಎಂದು ಹಾರೈಸುತ್ತೇವೆ.

Leave a Reply

Your email address will not be published. Required fields are marked *