ಬಂಟ್ವಾಳ: ನಮ್ಮ ಜವನೆರ್ ಸೇವಾ ಟ್ರಸ್ಟ್ (ರಿ.) ರಾಯಿ ಇದರ ವಾರ್ಷಿಕೋತ್ಸವದ ಅಂಗವಾಗಿ ನವೆಂಬರ್ 22ರಂದು ರಾಯಿಯ ಶ್ರೀಯಾ ಗಾರ್ಡನ್ನಲ್ಲಿ ವಿವಿಧ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮದ ಅಂಗವಾಗಿ ಆಳ್ವಾಸ್ ಹೆಲ್ತ್ ಸೆಂಟರ್ ಮೂಡುಬಿದಿರೆ ಸಹಯೋಗದಲ್ಲಿ ಬೃಹತ್ ಆರೋಗ್ಯ ಶಿಬಿರ ಹಾಗೂ ಎ.ಜೆ. ಬ್ಲಡ್ ಸೆಂಟರ್ ಮಂಗಳೂರು ಸಹಕಾರದಲ್ಲಿ ರಕ್ತದಾನ ಶಿಬಿರ ನಡೆಯಲಿದೆ. ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ಸಹಯೋಗದಲ್ಲಿ ಆಧಾರ್ ನೋಂದಣಿ, ತಿದ್ದುಪಡಿ ಹಾಗೂ ಸಮಗ್ರ ರಕ್ಷಣಾ ಯೋಜನೆಯಡಿ ಅಪಘಾತ ವಿಮೆ ಕುರಿತ ಅಂಚೆ ಜನಸಂಪರ್ಕ ಅಭಿಯಾನವೂ ಜರುಗಲಿದೆ.


ಇದರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ತುಳು ಜನಪದ ನಾಟಕ ‘ಕಾಡ ಗಗ್ಗರ’ ಪ್ರದರ್ಶನಗೊಳ್ಳಲಿದೆ.
ಸಿದ್ದಕಟ್ಟೆ ವ್ಯವಸಾಯಿಕ ಸೇವಾ ಸಹಕಾರಿ ಸಂಘ, ರೋಟರಿ ಕ್ಲಬ್ ಲೋರೆಟ್ಟೋ ಹಿಲ್ಸ್, ರೋಟರಿ ಕ್ಲಬ್ ಫಾಲ್ಗುಣಿ, ಸಿದ್ದಕಟ್ಟೆ ಹಳೆ ವಿದ್ಯಾರ್ಥಿ ಸಂಘ ರಾಯಿ, ರಾಯಿ ಗ್ರಾಮ ಪಂಚಾಯತ್, ಶ್ರೀ ಮಹಾಲಿಂಗೇಶ್ವರ ಯುವಕ ಮಂಡಲ, ರಾಯಿ ಹಾಲು ಉತ್ಪಾದಕರ ಸಹಕಾರಿ ಸಂಘ, ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಹಾಗೂ ಕೈತ್ರೋಡಿ ಫ್ರೆಂಡ್ಸ್ ಟ್ರಸ್ಟ್ ಸೇರಿದಂತೆ ಹಲವು ಸಂಘ-ಸಂಸ್ಥೆಗಳು ಕಾರ್ಯಕ್ರಮಕ್ಕೆ ಸಹಕರಿಸಲಿವೆ.

ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು, ಧಾರ್ಮಿಕ ಮುಖಂಡರು ಹಾಗೂ ಸಮಾಜದ ಪ್ರಮುಖರು ಭಾಗವಹಿಸಲಿದ್ದಾರೆ. ಟ್ರಸ್ಟ್ನ ಅಧ್ಯಕ್ಷರು ಹಾಗೂ ಸರ್ವಸದಸ್ಯರು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



