ಕಡಬ : ಕುಟುಂಬ ಕಲಹದಿಂದ ಅಣ್ಣ ತಮ್ಮಂದಿರ ನಡುವೆ ಜಗಳ ನಡೆದಿದ್ದುಕತ್ತಿಯಿಂದ ಹಲ್ಲೆಮಾಡಿರುವ ಘಟನೆ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಆಲಂಪಾಡಿಯಲ್ಲಿ ನಡೆದಿದೆ.
ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ರಾಜಶೇಖರ್(37) ಎಂದು ಗುರುತಿಸಲಾಗಿದೆ.

ಮನೆಯಲ್ಲಿದ್ದ ರಾಜಶೇಖರ್ ಅವರೊಂದಿಗೆ ಮನೋಜ್ ಅಸಭ್ಯ ಶಬ್ದಗಳಿಂದ ನಿಂದನೆ ನಡೆಸಿದ ಹಿನ್ನೆಲೆಯಲ್ಲಿ ವಾಗ್ವಾದ ಉಂಟಾಗಿದೆ. ಜಗಳದ ವೇಳೆ ಅಣ್ಣ ಜಯರಾಜ್ ಕತ್ತಿಯೊಂದನ್ನು ತೆಗೆದುಕೊಂಡು ರಾಜಶೇಖರ್ ಅವರ ಮೇಲೆ ಹಲ್ಲೆ ನಡೆಸಿದನು. ಈ ದಾಳಿಯಿಂದ ರಾಜಶೇಖರ್ ಅವರ ತಲೆ, ಹಣೆ, ಕೆನ್ನೆ, ಕೈ ಮತ್ತು ಕಾಲುಗಳಲ್ಲಿ ಗಂಭೀರ ಗಾಯವಾಗಿದೆ.

ಗಾಯಗೊಂಡ ರಾಜಶೇಖರ್ ಅವರನ್ನು ತಕ್ಷಣ ಮಂಗಳೂರು ಯೆನೆಪೋಯ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ನೆಲ್ಯಾಡಿ ಹೊರಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



