Breaking
21 Mar 2026, Sat

ಸುಬ್ರಹ್ಮಣ್ಯ: ಗಾಡಿ ಮೇಲೆ ಉರುಳಿ ಬಿದ್ದ ಮರದ ಕೊಂಬೆ

ಸುಬ್ರಹ್ಮಣ್ಯ: ಗಾಳಿ-ಮಳೆಗೆ ಮರದ ಕೊಂಬೆ ರಸ್ತೆಗೆ ಬಿದ್ದು, ಕಾರೊಂದು ಅದರಡಿಯಲ್ಲಿ ಸಿಲುಕಿದ ಘಟನೆ ಸುಬ್ರಹ್ಮಣ್ಯ-ಕಡಬ ರಾಜ್ಯ ಹೆದ್ದಾರಿಯ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ವಿಷ್ಣುಮೂರ್ತಿ ದೇವಸ್ಥಾನದ ಬಳಿ ಜುಲೈ 17ರಂದು ಸಂಭವಿಸಿದೆ.

ಭಾರೀ ಗಾಳಿಗೆ ಬೃಹತ್ ಮರದ ಕೊಂಬೆ ರಸ್ತೆಗೆ ಮುರಿದು ಬಿದ್ದಿದ್ದು, ಈ ವೇಳೆ ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಕಾರು ಅದರಡಿ ಸಿಲುಕಿಕೊಂಡಿತ್ತು. ಅದೃಷ್ಟವಶಾತ್ ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯಿಂದ ಕೆಲ ಕಾಲ ರಸ್ತೆ ತಡೆ ಉಂಟಾಗಿ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಬಳಿಕ ಸುಬ್ರಹ್ಮಣ್ಯ ಪೊಲೀಸರು, ಮೆಸ್ಕಾಂ ಸಿಬ್ಬಂದಿ ಹಾಗೂ ಸಾರ್ವಜನಿಕರು ಸೇರಿ ಕಾರ್ಯಾಚರಣೆ ನಡೆಸಿ ಮರವನ್ನು ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಸಹಕರಿಸಿದರು.

Leave a Reply

Your email address will not be published. Required fields are marked *