Breaking
20 Jun 2026, Sat

ಕಡಬದಲ್ಲಿ ಮರ ಬಿದ್ದು ವಿದ್ಯುತ್ ವ್ಯತ್ಯಯ

ಕಡಬ: ಕಳೆದೆರಡು ದಿನಗಳಿಂದ ಎಡಬಿಡದೆ ಸುರಿದ ಭಾರಿ ಮಳೆಗೆ ಬೃಹತ್‌ ಮರವೊಂದು ವಿದ್ಯುತ್‌ ತಂತಿಗಳ ಮೇಲೆ ಬಿದ್ದಿರುವ ಘಟನೆ ಸುಬ್ರಹ್ಮಣ್ಯ ಮುಖ್ಯರಸ್ತೆಯ ಕಾಶಿಕಟ್ಟೆಯ ಬಳಿ ಜೂನ್‌ 06 ರಂದು ನಡೆದಿದೆ.

ಈ ಘಟನೆಗೆ ಸಂಬಂಧಿಸಿದಂತೆ ಸಮೀಪದಲ್ಲಿದ್ದ ಎರಡು ವಿದ್ಯುತ್‌ ಕಂಬಗಳು ಸಂಪೂರ್ಣ ಧಾರಾಶಾಯವಾಗಿದ್ದು, ತಂತಿಗಳು ಹಾನಿಗೊಳಗಾಗಿವೆ. ಪರಿಣಾಮವಾಗಿ ಪರಿಸರದಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ.

ಮರವು ಮುಖ್ಯರಸ್ತೆಗೆ ಬಿದ್ದಿರಲಿಲ್ಲ. ಪಕ್ಕದ ಖಾಲಿ ಜಾಗಕ್ಕೆ ಬಿದ್ದಿದ್ದು, ಅಲ್ಲೇ ಪಾರ್ಕಿಂಗ್ ಪ್ರದೇಶದಲ್ಲಿಯೂ ಯಾವುದೇ ವಾಹನಗಳು ಇರಲಿಲ್ಲ. ಜೊತೆಗೆ ಜನ ಸಂಚಾರವೂ ಅಷ್ಟಾಗಿ ಇಲ್ಲದ ಕಾರಣದಿಂದಾಗಿ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

ಘಟನಾ ಸ್ಥಳಕ್ಕೆ ಮೆಸ್ಕಾಂ ಸಿಬ್ಬಂದಿಗಳು ತಕ್ಷಣ ಧಾವಿಸಿ ಭಾರೀ ಮಳೆಯ ನಡುವೆಯು ವಿದ್ಯುತ್‌ ಕಲ್ಪಿಸುವಲ್ಲಿ ಕಾರ್ಯಪ್ರವೃತ್ತರಾದರು.

Leave a Reply

Your email address will not be published. Required fields are marked *