Breaking
25 Sep 2026, Fri

ಐವರ್ನಾಡಿನಲ್ಲಿ ಬೈಕ್ ಮೇಲೆ ಬಿದ್ದ ವಿದ್ಯುತ್ ತಂತಿ: ಬೈಕ್ ಸವಾರನಿಗೆ ಗಾಯ

ಸುಳ್ಯ: ಸುಳ್ಯ-ಬೆಳ್ಳಾರೆ ರಸ್ತೆಯ ಐವರ್ನಾಡು ಬಳಿ ವಿದ್ಯುತ್‌ ತಂತಿ ತುಂಡಾಗಿ ಬೈಕ್ ಮೇಲೆ ಬಿದ್ದ ಪರಿಣಾಮ ಬೈಕ್ ಸವಾರ ರಸ್ತೆಗೆ ಬಿದ್ದು ಗಾಯಗೊಂಡಿರುವ ಘಟನೆ ನಡೆದಿದೆ.

ಗಾಯಗೊಂಡಿರುವ ವ್ಯಕ್ತಿ ಪೆರಾಜೆ ಅಂಚೆ ಕಚೇರಿಯಲ್ಲಿ ಅಂಚೆಪಾಲಕ ಸುಮಂತ್ ಎಂದು ಗುರುತಿಸಲಾಗಿದೆ.

ಬೆಳಗ್ಗೆ ಬೆಳ್ಳಾರೆಯಿಂದ ಪೆರಾಜೆಗೆ ಬರುತ್ತಿರುವಾಗ ಐವರ್ನಾಡು ಬಳಿ ವಿದ್ಯುತ್ ತಂತಿ ತುಂಡಾಗಿ ಬೈಕ್‌ನ ಮೇಲೆ ಬಿದ್ದು, ಕನ್ನಡಿಗೆ ಸಿಲುಕಿಕೊಂಡ ಪರಿಣಾಮ ಬೈಕ್‌ ನಿಯಂತ್ರಣ ತಪ್ಪಿ ಮಗುಚಿತು ಎನ್ನಲಾಗಿದೆ.

ಸುಮಂತ್ ಅವರ ಮೊಣಕಾಲಿಗೆ ತೀವ್ರ ಗಾಯವಾಗಿದೆ. ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *