ಪುಂಜಾಲಕಟ್ಟೆ: ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾಮದ ಕಜೆಕಾರು ಎಂಬಲ್ಲಿ ಕೂಲಿ ಕಾರ್ಮಿಕರೋರ್ವರು ವಿಷ ಪದಾರ್ಥ ಸೇವಿಸಿ ಮೃತಪಟ್ಟ ಘಟನೆ ಜೂನ್ 25 ರಂದು ನಡೆದಿದೆ.
ಮೃತಪಟ್ಟ ವ್ಯಕ್ತಿ ಬಡಗಕಜೆಕಾರು ಗ್ರಾಮದ ಕಜೆಕಾರು ನಿವಾಸಿ ಪುಷ್ಪರಾಜ(45) ಎಂಡು ಗುರುತಿಸಲಾಗಿದೆ.

ಪುಷ್ಪರಾಜ್ ಅಡಿಕೆ ಸುಲಿಯುವ ಕೆಲಸ ಮಾಡಿಕೊಂಡಿದ್ದು, ಕಾಲು ನೋವಿನಿಂದ ಬಳಲುತ್ತಿದ್ದರು. ಸುಮಾರು ಒಂದು ತಿಂಗಳ ಹಿಂದೆ ಯಾವುದೇ ಕೆಲಸವಿಲ್ಲದೇ ಕೈಸಾಲ ಮಾಡಿದ ಹಣವನ್ನು ಕೊಡಲು ಆಗದೇ ಇರುವ ಬಗ್ಗೆ ಆಗಾಗ ಪತ್ನಿಯಲ್ಲಿ ಹೇಳುತ್ತಿದ್ದರು.

ಜೂನ್ 24ರಂದು ಮನೆಯ ಮುಂದೆ ರಸ್ತೆಯಲ್ಲೇ ವಿಷಪದಾರ್ಥ ಸೇವಿಸಿ ಹೊರಲಾಡುತ್ತಿದ್ದ ಅವರನ್ನು ತಕ್ಷಣವೇ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲ್ಪಟ್ಟರೂ, ಚಿಕಿತ್ಸೆ ಫಲಕಾರಿಯಾಗದೆ ಜೂನ್ 25ರಂದು ಮೃತಪಟ್ಟಿದ್ದಾರೆ.

ಈ ಕುರಿತು ಮೃತರ ಪತ್ನಿ ಮೀನಾಕ್ಷಿ ಅವರು ನೀಡಿದ ದೂರಿನಂತೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

