ಮಂಗಳೂರು : ಎಡಕುಮೇರಿ-ಶಿರಿಬಾಗಿಲು ಬಳಿ ಗುಡ್ಡಕುಸಿತದಿಂದ ರೈಲ್ವೆ ಹಳಿ ಮೇಲೆ ಬಂಡೆಗಳು ಬಿದ್ದ ಪರಿಣಾಮ ಮೂರು ರೈಲುಗಳ ಸಂಚಾರದ ಸಮಯದಲ್ಲಿ ವ್ಯತ್ಯಯ. ಎಂದು ರೈಲ್ವೆ ಇಲಾಖೆ ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದೆ.

ವಿವಿಧ ಭಾಗಗಳಿಂದ ಸುಬ್ರಹ್ಮಣ್ಯ,ಧರ್ಮಸ್ಥಳ ಕಡೆಗೆ ಚಲಿಸುವ ರೈಲುಗಳನ್ನು ಸ್ಥಗಿತಗೊಳಿಸಲಾಗಿದೆ.

ನಿಮ್ಮ ರೈಲು ಎಲ್ಲಿದೆ ಎಂದು ತಿಳಿಯಲು ರೈಲ್ವೆ ಇಲಾಖೆಯ ಅಧಿಕೃತ ಜಾಲತಾಣ/ಅಪ್ಲಿಕೇಶನ್ ಎನ್.ಟಿ.ಇ.ಎಸ್ ಅಥವ ವೇರ್ ಇಸ್ ಮೈ ಟ್ರೈನ್ ಅಪ್ಲಿಕೇಶನ್ ಬಳಸಲು ಸೂಚಿಸಿದೆ.
ಪ್ರಯಾಣಿಕರಿಗೆ ಬೇಕಾಗುವ ಅಗತ್ಯ ವಸ್ತುಗಳು ಕುಡಿಯುವ ನೀರು, ಬಿಸ್ಕೆಟ್, ಉಪಹಾರ ಮತ್ತು ಚಹಾ ವ್ಯವಸ್ಥೆ ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ವಲಯ ತಿಳಿಸಿದೆ.
ರೈಲು ಸಂಖ್ಯೆ 16511 ಕೆಎಸ್ಆರ್ ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್ ಇದೀಗ ತಡವಾಗಿ ಬೆಳಗ್ಗೆ 9:18 ಎಡಕುಮೇರಿಯಿಂದ ಹೊರಟಿದ್ದು,

ರೈಲು ಸಂಖ್ಯೆ 16585 ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಮುರುಡೇಶ್ವರ ಎಕ್ಸ್‌ಪ್ರೆಸ್ ಬೆಳಗ್ಗೆ 9:05ಕ್ಕೆ ಸಕಲೇಶಪುರದಿಂದ ಹೊರಟಿದೆ.
ರೈಲು ಸಂಖ್ಯೆ 07377 ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ವಿಶೇಷ ರೈಲು ಸಕಲೇಶಪುರಕ್ಕೆ ಬೆಳಗ್ಗೆ 6:26ಕ್ಕೆ ಆಗಮಿಸಿದ್ದು ತಡವಾಗಿ ಹೊರಡಲಿದೆ.
