ಮಂಗಳೂರು: ವಿಶ್ವ ಕೊಂಕಣಿ ಕೇಂದ್ರದಲ್ಲಿ ವ್ಯಕ್ತಿತ್ವ ವಿಕಸನ ಹಾಗೂ ಕೌಶಲ್ಯಾಭಿವೃದ್ಧಿ ಕಾರ್ಯಾಗಾರ ಮಂಗಳೂರಿನಲ್ಲಿ ನಡೆಯಿತು.
ಕಾರ್ಯಾಗಾರದಲ್ಲಿ ಎ.ಜೆ ದಂತ ವೈದ್ಯಕೀಯ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್, ಡಾ. ರಿತೇಶ್ ಪ್ರಭು ಅವರು ಬಾಯಿ, ಮನುಷ್ಯನ ದೇಹದ ಆರೋಗ್ಯದ ಕೈಗನ್ನಡಿ ಇದ್ದಂತೆ. ಬಾಯಿ, ಹಲ್ಲುಗಳ ಸಂರಕ್ಷಣೆ ಅತೀ ಅಗತ್ಯ. ಇದಕ್ಕೆ ಸಂಬಂಧಿಸಿದ ಸಮಸ್ಯೆಗಳು ಬಂದಾಗ ನಿರ್ಲಕ್ಷಿಸದೆ, ಕಾಲಕಾಲಕ್ಕೆ ತಜ್ಙ ವೈದ್ಯರ ಸಲಹೆಗಳನ್ನು ಪಡೆಯುವುದು ಅತಿ ಅವಶ್ಯಕ. ಹಲ್ಲು ನೋವಿನ ತೀವ್ರತೆಯಿಂದ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಹಾಗೂ ಅಸಮತೆ ಇರುವ ಹಲ್ಲುಗಳನ್ನು ಸೂಕ್ತ ಚಿಕಿತ್ಸೆಗಳಿಂದ ಕಡಿಮೆ ಅವಧಿಯಲ್ಲಿ ಸರಿಪಡಿಸಿಕೊಂಡು, ಅವರಲ್ಲಿ ಆತ್ಮ ವಿಶ್ವಾಸವನ್ನು ಬೆಳೆಸಬಹುದು. ಹಲ್ಲುಗಳ ವಿವಿಧ ರೀತಿಯ ರೋಗ ಲಕ್ಷಣಗಳು ಹಾಗೂ ಅದನ್ನು ಸರಿಪಡಿಸುವ ವಿವಿಧ ಚಿಕಿತ್ಸಾಕ್ರಮಗಳನ್ನು ವಿವರಿಸಿದರು. ಶಿಬಿರಾರ್ಥಿಗಳೊಂದಿಗೆ ಮುಕ್ತ ಸಂವಾದವನ್ನು ನಡೆಸಿದರು.

ಈ ಸಂದರ್ಭದಲ್ಲಿ ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷರಾದ ಶ್ರೀ ಡಿ ರಮೇಶ ನಾಯಕ್ ಮೈರಾ, ಪ್ರತಿಷ್ಠಾನದ ಅಧ್ಯಕ್ಷರಾದ ಮುರಳಿಧರ ಪ್ರಭು ವಗ್ಗ ಮೋಹನ್ ನಾಯಕ್ ಒಡ್ಡೂರು, ಗೋಪಾಲ್ ಸಾಮಂತ್ ಮೈರ, ಶ್ರೀಮತಿ ಸುಚಿತ್ರ ರಮೇಶ್ ನಾಯಕ್ ಉಪಸ್ಥಿತರಿದ್ದರು.

ಶಿಬಿರಾರ್ಥಿಯಾದ ವಿಘ್ನೇಶ್ ಪ್ರಭು ಪಂಜಿಕಲ್ಲು ವಂದಿಸಿ, ಡಾ. ವಿಜಯಲಕ್ಷ್ಮಿ ನಾಯಕ್ ಕಾರ್ಯಕ್ರಮವನ್ನು ನಿರೂಪಿಸಿದರು.



