ಸುಳ್ಯ: ಕೇರಳದ ಕಣ್ಣೂರಿನಲ್ಲಿ ಕೆರೆಗೆ ಸ್ನಾನಕ್ಕೆಂದು ತೆರಳಿದ ಸಂದರ್ಭದಲ್ಲಿ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಜುಲೈ 20 ರಂದು ನಡೆದಿದೆ.
ಮೃತಪಟ್ಟ ಯುವಕನ್ನು ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಬಾಳಿಕಲ ನಿವಾಸಿ ಸುಳ್ಯದ ನಿವೃತ್ತ ತಾಲೂಕು ಆರೋಗ್ಯಾಧಿಕಾರಿ ಡಾ.ನಂದ ಕುಮಾರ್ ಅವರ ಪುತ್ರ, ಆಸ್ತಿಕ್ ರಾಘವ್ (19) ಎಂದು ಗುರುತಿಸಲಾಗಿದೆ.

ಆಸ್ತಿಕ್ ರಾಘವ್ ಮಂಗಳೂರಿನ ಖಾಸಗಿ ಡೆಂಟಲ್ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದು, ತನ್ನ ಗೆಳೆಯನೊಂದಿಗೆ ಕೇರಳದ ಕಣ್ಣೂರಿನ ಸಹಪಾಠಿ ಮನೆಗೆ ಭಾನುವಾರ ಬೆಳಿಗ್ಗೆ ತೆರಳಿದ್ದರು. ಬಳಿಕ ಅವರು ಮನೆ ಪಕ್ಕದ ಕೆರೆಗೆ ಸ್ನಾನಕ್ಕೆ ಹೋದಾಗ ಆಸ್ತಿಕ್ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಆಸ್ತಿಕ್ ರಾಘವ್ ತಂದೆ, ತಾಯಿ, ಸಹೋದರಿಯನ್ನು ಅಗಲಿದ್ದಾರೆ.




