ಕುಂದಾಪುರ: 5.6 ಲಕ್ಷ ಮೌಲ್ಯದ ಅಡಿಕೆ ಕಳ್ಳತನ ಪ್ರಕರಣ; ನಾಲ್ವರ ಬಂಧನ

ಕುಂದಾಪುರ : ಯಡ್ತರೆ ಗ್ರಾಮದ ಹಡಿನಗದ್ದೆ ಎಂಬಲ್ಲಿ ಎರಡು ತಿಂಗಳ ಹಿಂದೆ ನಡೆದ ಲಕ್ಷಾಂತರ ರೂ. ಮೌಲ್ಯದ ಅಡಿಕೆ ಕಳವು ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕಡಬ ತಾಲೂಕಿನ ನೂಜಿ ಬಾಳ್ತಿಲದ ಸಂತೋಷ (35), ಭಟ್ಕಳ ನಿವಾಸಿಯಾದ ಧಾರವಾಡ ಮೂಲದ ಶಾನೂರ್ ಬಾಬುಲಾಲ್ ನವಾಜ್ ಘಜ್ನಿ (31), ಭಟ್ಕಳದ ಖ್ವಾಜಾ ಮೊಹಮ್ಮದ್ (26) ಮತ್ತು ಮೊಹಮ್ಮದ್ ಸಾದಿಕ್ (27) ಎಂದು ಗುರುತಿಸಲಾಗಿದೆ.

ಹಡಿನಗದ್ದೆಯ ಮಸೂದ್ ಪಟೇಲ್ ಎಂಬವರು ತನ್ನ ತೋಟದಲ್ಲಿ ಬೆಳೆದ ಸುಮಾರು 200 ಚೀಲ ಒಣಗಿಸಿದ ಸಿಪ್ಪೆಅಡಿಕೆಯನ್ನು ಗೋಡೌನ್ನಲ್ಲಿ ಇಟ್ಟಿದ್ದರು. ಮೇ 15ರಿಂದ ಮೇ 22ರ ಮಧ್ಯಾವಧಿಯಲ್ಲಿ ಕಳ್ಳರು ಗೋಡೌನ್ ಬೀಗ ಮುರಿದು ಒಳನುಗ್ಗಿ ಒಟ್ಟು 5.60ಲಕ್ಷ ರೂ. ವೌಲ್ಯದ ಅಡಿಕೆಗಳನ್ನು ಕಳವು ಮಾಡಿದ್ದಾರೆ ಎನ್ನಲಾಗಿದೆ.

ಸದ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಕಳವು ಮಾಡಿದ 455 ಕೆ.ಜಿ ಅಡಿಕೆ ಮತ್ತು ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *