ಸಿದ್ದಕಟ್ಟೆ : ವಿವಿಧ ಪಿಂಚಣಿಗಳಿಗೆ ಬಿ.ಪಿ.ಎಲ್ ಪಡಿತರ ಚೀಟಿಯ ಆದಾಯ ಮಿತಿಯನ್ನು ಪರಿಗಣಿಸುವಂತೆ ಕಂದಾಯ ಸಚಿವರಿಗೆ ಸಮಾಜಿ ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಪತ್ರದ ಮೂಲಕ ಮನವಿ ಮಾಡಿದ್ದಾರೆ.
” ಬಿ.ಪಿ.ಎಲ್ ಪಡಿತರ ಚೀಟಿ ಪಡೆಯಲು ಕುಟುಂಬ ವಾರ್ಷಿಕ ಆದಾಯ 1.20 ಲಕ್ಷ ವರೆಗೆ ಮಿತಿಯನ್ನು ವಿಧಿಸಲಾಗಿದ್ದು ಅದರಂತೆ ಅರ್ಹ ಫಲಾನುಭವಿಗಳು ಆದಾಯದ ಮಿತಿ 1.20 ಲಕ್ಷಕ್ಕಿಂತ ಕಡಿಮೆ ಇರುವವರು ಬಿ.ಪಿ.ಎಲ್ ಪಡಿತರ ಚೀಟಿನ್ನು ಪಡೆದಿರುತ್ತಾರೆ .ಈ ಕುಟುಂಬದಲ್ಲಿನ ಸದಸ್ಯರಿಗೆ ಅವರವರ ಅಗ್ಯತಕ್ಕೆ ಅನುಗುಣವಾಗಿ ಶಾಲಾ ಪ್ರವೇಶ ಶುಲ್ಕ ವಿನಾಯಿತಿ , ವಿವಿಧ ವಿದ್ಯಾರ್ಥಿ ವೇತನಗಳಿಗೆ ಸಂಬಂಧಿಸಿದಂತೆ ತಾವು ಹೊಂದಿರುವ ಬಿ.ಪಿ.ಎಲ್ ಪಡಿತರ ಚೀಟಿಯ ಆಧಾರದಲ್ಲಿ 32,000.ನಿಂದ 1.20 ಲಕ್ಷ ವರೆಗಿನ ಆದಾಯ ಪ್ರಮಾಣ ಪತ್ರ ಪಡೆದಿರುತ್ತಾರೆ . ಇಂತಹ ಕುಟುಂಬದಲ್ಲಿನ ಸದಸ್ಯರು ವಿಧವಾ ವೇತನ , ವೃದ್ದಾಪ್ಯ ವೇತನ , ಸಂಧ್ಯಾ ಸುರಕ್ಷಾ ಯೋಜನೆ , ರಾಷ್ಟ್ರೀಯ ಕುಟುಂಬ ಪರಿಹಾರ ನಿಧಿ ಸೇರಿದಂತೆ ಇನ್ನಿತರ ಸಾಮಾಜಿಕ ಭದ್ರತೆ ಪಿಂಚಣಿಗಳಿಗೆ ಅರ್ಜಿ ಸಲ್ಲಿಸುವ ಸಂಧರ್ಭದಲ್ಲಿ ಆದಾಯ ಮಿತಿ 32000 ಸಾವಿರಕ್ಕಿಂತ ಜಾಸ್ತಿ ಇರುವ ಕಾರಣದಿಂದ ಸಂಬಂಧಿಸಿದ ಅರ್ಜಿಗಳು ತಿರಸ್ಕ್ರತಗೊಳ್ಳುತ್ತಿವೆ .
ಇದರಿಂದಾಗಿ ಕಳೆದ 2-3 ತಿಂಗಳುಗಳಲ್ಲಿ ರಾಜ್ಯದಲ್ಲಿ ಸಾವಿರಾರು ಮಂದಿ ಬಿ.ಪಿ.ಎಲ್ ಪಡಿತರ ಹೊಂದಿದ ಅರ್ಹ ಫಲಾನುಭವಿಗಳು ಸರಕಾರದ ವಿವಿಧ ಪಿಂಚಣಿ ಸೌಲಭ್ಯವನ್ನು ಪಡೆಯುವಲ್ಲಿ ವಂಚಿತರಾಗುತ್ತಿದ್ದಾರೆ .ಈ ಹಿನ್ನಲೆಯಲ್ಲಿ ಬಿ.ಪಿ.ಎಲ್ ಪಡಿತರ ಚೀಟಿ ಪಡೆಯಲು ಸರಕಾರ ವಿಧಿಸಿದ ಆದಾಯದ ಮಿತಿ 1.20 ಲಕ್ಷವನ್ನು ಸರಕಾರದ ವಿವಿಧ ಪಿಂಚಣಿ ಸೌಲಭ್ಯಗಳಿಗೂ ಅನ್ವಯ ಮಾಡಬೇಕು ಎಂದು ಈ ಮೂಲಕ ವಿನಂತಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.




