Breaking
14 Jul 2026, Tue

ಹಿಮಾಚಲದಲ್ಲಿ ಭೂ ಕುಸಿತ : ಹೆದ್ದಾರಿ ಬ್ಲಾಕ್ ನಲ್ಲಿ ಸಿಲುಕಿಕೊಂಡ ಬಂಟ್ವಾಳದ 47 ಮಂದಿ

ಬಂಟ್ವಾಳ: ಹಿಮಾಚಲ ಪ್ರದೇಶದಲ್ಲಿ ಭೂ ಕುಸಿತ ಉಂಟಾಗಿ ಬಂಟ್ವಾಳದಿಂದ ತೀರ್ಥಕ್ಷೇತ್ರಕ್ಕೆ ತೆರಳಿರುವ ಸುಮಾರು 47 ಮಂದಿ ಹೆದ್ದಾರಿ ಬ್ಲಾಕ್ ನಲ್ಲಿ ಸಿಲುಕಿದ್ದಾರೆ.

ಶಿಮ್ಲಾ ಮನಾಲಿ ಹೆದ್ದಾರಿಯಲ್ಲಿ ದೊಡ್ಡ ಮಟ್ಟದ ಭೂ ಕುಸಿತ ಉಂಟಾಗಿದ್ದು, ಒಂದಷ್ಟು ವಾಹನಗಳು ಮಣ್ಣಿನಡಿಗೆ ಸಿಲುಕಿದೆ.

ಬಂಟ್ವಾಳದ ಪ್ರಯಾಣಿಕರಿದ್ದ ಮೂರು ವಾಹನಗಳು ಕುಸಿತದ ಸ್ಥಳಕ್ಕಿಂತ ಬಹಳ ದೂರದಲ್ಲಿ ಇರುವ ಹಿನ್ನೆಲೆಯಲ್ಲಿ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *