Breaking
20 Sep 2026, Sun

ಮನೆಯಂಗಳಕ್ಕೆ ಲಗ್ಗೆ ಇಟ್ಟ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಬಂಟ್ವಾಳ: ತಾಲೂಕಿನ ಕೃಷಿಕರೊಬ್ಬರ ಮನೆ ಬಳಿ ಚಿರತೆ ಬಂದು ಸಾಕುನಾಯಿಗಳ ಮೇಲೆ ದಾಳಿ ನಡೆಸಲು ಯತ್ನಿಸಿದ ಘಟನೆ ಸಿಸಿಟಿವಿ ಮೂಲಕ ಬೆಳಕಿಗೆ ಬಂದಿದೆ.

ಮೂಡನಡುಗೋಡು ಗ್ರಾಮದ ಬಾಬತೋಟದ ಕೃಷಿಕರೊಬ್ಬರ ಮನೆಯಲ್ಲಿ ಜು.17ರಂದು ನಾಯಿಗಳು ಜೋರಾಗಿ ಅರಚಾಡಿತ್ತು. ಈ ವೇಳೆ ಮನೆಯವರು ಯಾರೋ ಬಂದ ರೀತಿ ನಾಯಿಗಳು ಬೊಗಳುತ್ತಿದೆ ಎಂದು ಸುಮ್ಮನಾಗಿದ್ದರು. ಸಿಸಿಟಿವಿಯಲ್ಲಿ ದೃಶ್ಯಗಳನ್ನು ವೀಕ್ಷಿಸುವ ಮಾನಿಟರ್‌ ಹಾಳಾಗಿದ್ದ ಹಿನ್ನಲೆಯಲ್ಲಿ ಬಂದಿರುವುದು ಚಿರತೆ ಎಂಬುದು ಜು. 20ರಂದು ಮಾನಿಟರ್ ದುರಸ್ತಿಯಾದ ಬಳಿಕವೇ ತಿಳಿದಿದೆ.

ಮನೆಯ ಕಾಂಪೌಂಡ್‌ ಮೇಲೆ ಬಂದ ಚಿರತೆ ನಾಯಿಗಳ ಮೇಲೆ ದಾಳಿಗೆ ಯತ್ನಿಸಿದೆ. ಆದರೆ ನಾಯಿಗಳ ಅರಚಾಟಕ್ಕೆ ಚಿರತೆ ವಾಪಾಸ್ಸಾಗಿದೆ.

Leave a Reply

Your email address will not be published. Required fields are marked *