Breaking
16 Jul 2026, Thu

ಮಜಿ ವಿರಕಂಬ ಶಾಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ

ಬಂಟ್ವಾಳ: ಜೂ.21 ಯೋಗವು ಭಾರತದ ಪುರಾತನ ಶಾಸ್ತ್ರದಿಂದ ದೊರಕಿದ ಒಂದು ವರದಾನವಾಗಿದೆ ,ಇಂದು ಪ್ರಪಂಚದಾದ್ಯಂತ ಯೋಗಾಸನವು ಮನೆಮದ್ದಾಗಿದ್ದು ಮನಸ್ಸು ಮತ್ತು ದೇಹದ ನಡುವಿನ ಸಂಕೋಲೆಯಂತೆ ಕಾರ್ಯನಿರ್ವಹಿಸುತ್ತದೆ.

ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಯೋಗ ದಿನಾಚರಣೆಯನ್ನು ಆಚರಿಸುತ್ತಿದ್ದು ಮನೆ ಮನೆಗಳಲ್ಲೂ ನಡೆಯಬೇಕಾಗಿದೆ, ಯೋಗದಿಂದ ಒತ್ತಡವನ್ನು ಕಡಿಮೆ ಮಾಡಿ ಶಾಂತಿ ಸಮಾಧಾನವನ್ನು ಪಡೆಯಬಹುದಾಗಿದೆ, ಎಂಬುದಾಗಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿಯ ಪ್ರಾಥಮಿಕ ಶಾಲೆ ಮಜಿ ವಿರಕಂಬ ಇಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಉದ್ಘಾಟನೆಯನ್ನು ಮಾಡಿ ಎಸ್ ಪಿ ವೈ ಎಸ್ ಎಸ್ ಇದರ ಕೆಲೆಂಜ ಶಾಖೆಯಾದ ಶ್ರೀನಿಕೇತನ ತಂಡದಿಂದ ವಿದ್ಯಾರ್ಥಿಗಳಿಗೆ ಸರಳ ಯೋಗ ಅಭ್ಯಾಸ ಮತ್ತು ಪ್ರಾಣಾಯಾಮ ಅಭ್ಯಾಸದ ಬಗ್ಗೆ ರಾಮಣ್ಣ ರವರು ತಿಳಿಸಿದರು.

ಈ ಸಂದರ್ಭದಲ್ಲಿ ಶಾಖೆಯ ಬಾಬಕಿರಣ್, ಕುಸುಮ, ಮತ್ತು ಗೀತಾ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಂದ ಪ್ರಾಣಾಯಾಮ ಮತ್ತು ಸರಳಯೋಗಾಸನಗಳನ್ನು ಮಾಡಿಸಿದರು.

ದೈಹಿಕ ಶಿಕ್ಷಕ ಇಂದು ಶೇಖರ್ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕಿ ಸಂಗೀತ ಶಮ೯ರವರು ಧನ್ಯವಾದ ನೀಡಿದರು.

Leave a Reply

Your email address will not be published. Required fields are marked *