ಬಂಟ್ವಾಳ: ಚಿರತೆ ಪತ್ತೆಗಾಗಿ ಅರಣ್ಯಾಧಿಕಾರಿಗಳಿಂದ ಬೋನು ಅಳವಡಿಕೆ

ಬಂಟ್ವಾಳ: ಮೂಡನಡುಗೋಡು ಗ್ರಾಮದ ಬಾಬತೋಟದ ಕೃಷಿಕ ಪ್ರಕಾಶ್ ಪೂಜಾರಿ ಅವರ ಮನೆ ಸಮೀಪ ಚಿರತೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿರುವ ಹಿನ್ನೆಲೆ, ಬಂಟ್ವಾಳ ವಲಯ ಅರಣ್ಯ ಇಲಾಖೆ ತಂಡ ಸ್ಥಳಕ್ಕೆ ಭೇಟಿ ನೀಡಿ ಮನೆಯ ಪಕ್ಕದ ಗುಡ್ಡ ಪ್ರದೇಶದಲ್ಲಿ ಬೋನು ಅಳವಡಿಸಿದೆ.

ಬಂಟ್ವಾಳ ವಲಯ ಅರಣ್ಯಾಧಿಕಾರಿ ಸುನೀಲ್ ಡಿಸೋಜ ಅವರ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿ ವಿಕಾಸ್ ಶೆಟ್ಟಿ, ಅರಣ್ಯ ಪಾಲಕಿ ಸ್ಮಿತಾ ಮೊದಲಾದವರು ಪ್ರಕಾಶ್ ಪೂಜಾರಿ ಅವರ ಮನೆಗೆ ಭೇಟಿ ನೀಡಿದರು.

ತಾಲೂಕಿನಲ್ಲಿ ಚಿರತೆಗಳು ವಾಸವಿರುವ ಐದು ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಬೋನುಗಳನ್ನು ಅಳವಡಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *