ಕಾಸರಗೋಡು: ಶಾಲಾ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿದ ಘಟನೆ ಜು.21 ರಂದು ಚಿತ್ತಾರಿಯಲ್ಲಿ ನಡೆದಿದೆ.
ಸೌತ್ ಚಿತ್ತಾರಿಯ ಸಮೀಪ ಕೋಟಿಕುಳಂ ಶಾಲೆಯ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ಸು ಅಪಘಾತಕ್ಕಿಡಾಗಿದ್ದು, ರಸ್ತೆಯಿಂದ ಜಾರಿದ ಬಸ್ಸು ತೆಂಗಿಗೆ ತಾಗಿ ನಿಂತಿದ್ದರಿಂದ ದೊಡ್ಡ ದುರಂತವೊಂದು ತಪ್ಪಿದೆ. ಅದೃಷ್ಟವಶಾತ್ ಬಸ್ಸಿನಲ್ಲಿದ್ದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಅಪಾಯದಿಂದ ಪಾರಾಗಿದ್ದಾರೆ.

ವಿದ್ಯಾರ್ಥಿಗಳನ್ನು ರಕ್ಷಿಸಿ ಬೇರೆ ವಾಹನದಲ್ಲಿ ಶಾಲೆಗೆ ಕರೆದೊಯ್ಯಲಾಯಿತು. ಬಳಿಕ ಕ್ರೇನ್ ಬಳಸಿ ಬಸ್ಸನ್ನು ಮೇಲಕ್ಕೆತ್ತಲಾಯಿತು ಎಂದು ತಿಳಿದುಬಂದಿದೆ.



