Breaking
14 Jul 2026, Tue

ಗಾಂಜಾ ಮಿಶ್ರಿತ ಸಿಗರೇಟು ಸೇವನೆ : ಯುವಕ ಪೊಲೀಸ್ ವಶಕ್ಕೆ

ಮಂಗಳೂರು: ಉರ್ವಸ್ಟೋರ್ ಕೋಟೆಕಣಿ ಬಳಿ ಸಾರ್ವಜನಿಕ ರಸ್ತೆ ಬದಿಯಲ್ಲಿ ಮಾದಕವಸ್ತು ಗಾಂಜಾ ಬೆರೆಸಿದ ಸಿಗರೇಟು ಸೇದುತ್ತಿದ್ದ ವ್ಯಕ್ತಿಯೊವ೯ನನ್ನು, ಪೊಲೀಸರು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಉರ್ವಸ್ಟೋರ್ ಅಂಗಡಿಗುಡ್ಡೆ ನಿವಾಸಿ ನಂದನ್ (22) ಎಂದು ಗುರುತಿಸಲಾಗಿದೆ.

ತೊದಲು ಮಾತು ಮತ್ತು ಬಾಯಿಯಿಂದ ಮಾದಕ ಪದಾರ್ಥದ ಘಾಟು ಬರುತ್ತಿದ್ದ ಕಾರಣ ಪೊಲೀಸರು ಅನುಮಾನಗೊಂಡು ವಿಚಾರಿಸಿದಾಗ ಆತ ಸಿಕ್ಕಿಬಿದ್ದಿದ್ದು, ಗಾಂಜಾ ಸೇವನೆ ಮಾಡಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.

ಈ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *