Breaking
13 May 2026, Wed

ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾತ್ರೆ ಮತ್ತೆ ವಿಳಂಬ

ನವದೆಹಲಿ: ಇದೇ ಜೂನ್ 19ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಬೇಕಿದ್ದ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿ ನಾಲ್ವರ ಯಾನ ಮತ್ತೆ ಮುಂದೂಡಿಕೆಯಾಗಿದೆ.

ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಭಾಗಿಯಾಗಿರುವ ‘ಆ್ಯಕ್ಸಿಯಂ-4’ ಬಾಹ್ಯಾಕಾಶ ಯಾನವನ್ನು ಜೂನ್ 19ರಂದು ಉಡಾವಣೆ ಮಾಡಲು ನಿಗದಿಯಾಗಿತ್ತು. ಆದರೆ ಸ್ಪೇಸ್‌ಎಕ್ಸ್‌ನ ಫಾಲ್ಕನ್ 9 ಉಡಾವಣಾ ವಾಹನದಲ್ಲಿ ತಾಂತ್ರಿಕ ದೋಷ (LOX ಸೋರಿಕೆ) ಕಂಡುಬಂದ ಹಿನ್ನೆಲೆಯಲ್ಲಿ ಈ ಯಾನವನ್ನು ಮತ್ತೆ ಮುಂದೂಡಲಾಗಿದೆ.

ಇಸ್ರೋ, ನಾಸಾ, ಆಕ್ಸಿಯಮ್ ಸ್ಪೇಸ್ ಹಾಗೂ ಸ್ಪೇಸ್‌ಎಕ್ಸ್ ಪರಸ್ಪರ ಚರ್ಚೆ ನಡೆಸಿ, ತೊಂದರೆ ಸರಿಪಡಿಸಿ ಪರೀಕ್ಷೆ ನಡೆಸಲು ತೀರ್ಮಾನಿಸಿದೆ.

ಇದೀಗ, ಎಲ್ಲಾ ಮೌಲ್ಯಮಾಪನಗಳ ಬಳಿಕ ಜೂನ್ 22ರಂದು ಸಂಭಾವ್ಯ ಉಡಾವಣಾ ದಿನಾಂಕವನ್ನು ಘೋಷಿಸಲಾಗುವುದು ಎಂದು ಇಸ್ರೋ ತಿಳಿಸಿದೆ.

Leave a Reply

Your email address will not be published. Required fields are marked *