ಟ್ರಕ್ – ಖಾಸಗಿ ಶಾಲಾ ವ್ಯಾನ್ ಡಿಕ್ಕಿ: ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳಿಂದ ಪಾರು

ಬ್ರಹ್ಮಾವರ: ಧರ್ಮಾವರ ಬಳಿ ಟ್ರಕ್ ಮತ್ತು ಖಾಸಗಿ ಶಾಲಾ ವ್ಯಾನ್ ಡಿಕ್ಕಿಯಾದ ಘಟನೆ ಜೂನ್ 18 ರಂದು ನಡೆದಿದೆ.

ಕುಂದಾಪುರದಿಂದ ಬ್ರಹ್ಮಾವರದ ಕಡೆಗೆ ಒಂದೇ ದಿಕ್ಕಿನಲ್ಲಿ ಎರಡೂ ವಾಹನಗಳು ಸಾಗುತ್ತಿದ್ದು, ಶಾಲಾ ವ್ಯಾನ್ ಯೂ-ಟರ್ನ್ ತೆಗೆದುಕೊಳ್ಳಲು ಪ್ರಯತ್ನದಲ್ಲಿದ್ದ ವೇಳೆ ಟ್ರಕ್ ಡಿಕ್ಕಿಯಾಗಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಅಪಘಾತದ ಸಂದರ್ಭದಲ್ಲಿ ವ್ಯಾನ್‌ನಲ್ಲಿ ವಿದ್ಯಾರ್ಥಿಗಳಿದ್ದು ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದು, ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *