Breaking
21 Jun 2026, Sun

ಕ್ರೇನ್‌ ತೊಟ್ಟಿಲಿನಿಂದ ಉರುಳಿ ಬಿದ್ದು ಓರ್ವ ಸಾವು: ಮಹಿಳೆ ಗಂಭೀರ

ಉಡುಪಿ: ಕ್ರೇನ್‌ ತೊಟ್ಟಿಲಿನಿಂದ ಉರುಳಿ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ‌ಕೋರ್ಟ್ ಹಿಂಬಾಗ ರಸ್ತೆಯ ಲೋಕೋಪಯೋಗಿ ಇಲಾಖೆ ಕಚೇರಿ ಬಳಿ ಇಂದು ನಡೆದಿದೆ.

ಮೃತಪಟ್ಟಿರುವ ವ್ಯಕ್ತಿಯನ್ನ ಪ್ರಾನ್ಸಿಸ್ ಪಟೊರ್ಡೋ (65) ಎಂದು ಗುರುತಿಸಲಾಗಿದೆ.

ಮನೆಯ ಸ್ಲ್ಯಾಬ್ ಸೋರಿಕೆ ಸ್ಥಳವನ್ನು ಪರೀಕ್ಷಿಸಲು ಹೋಗಿದ್ದು ಕ್ರೇನ್‌ ತೊಟ್ಟಿಲನ್ನು ಏರಿದಾಗ ತೊಟ್ಟಿಲಿನಿಂದ ಉರುಳಿ ಬಿದ್ದು ಓರ್ವ ಸ್ಥಳದಲ್ಲಿ ಮೃತಪಟ್ಟಿದ್ದಾರೆ.

ಈ ವೇಳೆ ಅವರ ಜೊತೆಗಿದ್ದ ಮನೆಯ ಕೆಲಸದಾಕೆ ಕಲ್ಮಾಾಡಿ ನಿವಾಸಿ ಗೀತಾ (35) ಅವರಿಗೆ ಗಂಭೀರ ಗಾಯವಾಗಿದೆ.

ಘಟನೆಯ ಬಳಿಕ ಕ್ರೇನ್‌ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *