Breaking
6 Aug 2026, Thu

ಆಟೋದಲ್ಲಿ ಸಿಕ್ಕಿದ ಚಿನ್ನದ ಸರವನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

ಸುಳ್ಯ: ಆಟೋದಲ್ಲಿ ಬಿದ್ದಿದ್ದ ಚಿನ್ನದ ಸರವನ್ನು ಸುರಕ್ಷಿತವಾಗಿ ಮರಳಿಸಿ ಆಟೋ ಚಾಲಕರೊಬ್ಬರು ಮೆಚ್ಚುಗೆ ಗಳಿಸಿದ್ದಾರೆ.

ನಗರದ ಕೆವಿಜಿ ಆಟೋ ಪಾರ್ಕಿಂಗ್‌ನಲ್ಲಿ ಕಳೆದ ಹಲವು ವರ್ಷಗಳಿಂದ ಆಟೋ ಚಾಲಕರಾಗಿ ಕೆಲಸಮಾಡುತ್ತಿರುವ ರತ್ನಾಕರ ಅಡ್ಡಂಗಾಯ ಅವರ ಆಟೋದಲ್ಲಿ ಇತ್ತೀಚೆಗೆ ನೌಫಲ್ ಎಂಬವರ ಮಗಳು ಪ್ರಯಾಣಿಸುತ್ತಿದ್ದರು. ಈ ವೇಳೆ ಅವರ ಚಿನ್ನದ ಸರ ಆಟೋದಲ್ಲಿ ಬಿದ್ದು ಹೋಗಿದೆ. ಆದರೆ ಸರ ಬಿದ್ದಿರುವುದು ಯಾರಿಗೂ ತಕ್ಷಣ ಗೊತ್ತಾಗಲಿಲ್ಲ.

ನಂತರ ನೌಫಲ್ ಅವರು ಆಟೋದಲ್ಲೇ ಸರ ಬಿದ್ದಿರಬಹುದು ಎಂಬ ಅನುಮಾನದಿಂದ ಸಂಪರ್ಕಿಸಿ ವಿಚಾರಿಸಿದಾಗ, ರತ್ನಾಕರ ತಮ್ಮ ಆಟೋವನ್ನು ಪರಿಶೀಲಿಸಿ ಚಿನ್ನದ ಸರವನ್ನು ಪತ್ತೆಹಚ್ಚಿದರು. ಬಳಿಕ ಅದನ್ನು ನೌಫಲ್ ಅವರಿಗೆ ಹಿಂತಿರುಗಿಸಿದರು.

ರತ್ನಾಕರ ಅವರ ಈ ಪ್ರಾಮಾಣಿಕ ನಡವಳಿಕೆಗೆ ಸ್ಥಳೀಯರು ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆದಾರರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *