Breaking
22 Mar 2026, Sun

ಕಾಸರಗೋಡು: ಕಂಟೈನರ್ ಲಾರಿಯಲ್ಲಿ ಬೆಂಕಿ ಅವಘಡ – ಹಲವು ಫ್ರಿಡ್ಜ್‌ಗಳಿಗೆ ಹಾನಿ

ಕಾಸರಗೋಡು: ಕಂಟೈನರ್ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಕಾಸರಗೋಡು-ಕಾಞಾಂಗಾಡ್ ರಾಜ್ಯ ಹೆದ್ದಾರಿಯ ಕೂವತ್ತೊಟ್ಟಿ ಎಂಬಲ್ಲಿ ಜೂನ್ 13ರಂದು ನಡೆದಿದೆ.

ಪುಣೆಯಿಂದ ಕೋಜಿಕ್ಕೋಡ್‌ಗೆ ರೆಫ್ರಿಜರೇಟರ್‌ಗಳನ್ನು ಸಾಗಿಸುತ್ತಿದ್ದ ಲಾರಿಗೆ ವಿದ್ಯುತ್ ತಂತಿ ತಗಲಿದ ಪರಿಣಾಮ ಈ ಅನಾಹುತ ಸಂಭವಿಸಿದೆ ಎಂದು ಶಂಕಿಸಲಾಗಿದೆ.

ತಕ್ಷಣವೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ತ್ವರಿತ ಕಾರ್ಯಾಚರಣೆ ಮೂಲಕ ಬೆಂಕಿಯನ್ನು ನಂದಿಸಿ ಹೆಚ್ಚಿನ ನಷ್ಟವನ್ನು ತಪ್ಪಿಸಿದ್ದಾರೆ.

ಕಂಟೈನರ್‌ನೊಳಗಿನ 10ಕ್ಕೂ ಹೆಚ್ಚು ಫ್ರಿಡ್ಜ್‌ಗಳು ಭಾಗಶಃ ಹಾನಿಗೊಂಡಿದ್ದು, ಉಳಿದವುಗಳನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published. Required fields are marked *