ಕಾರ್ಕಳ: ಅಸೌಖ್ಯದ ಕಾರಣದಿಂದಾಗಿ ಅಮರಶಿಲ್ಪಿ ಪ್ರಶಸ್ತಿ ಪುರಸ್ಕೃತರಾದ , ಕಲ್ಲೊಟ್ಟಿ ಹೂ ಶೇಷಪ್ಪ ಆಚಾರ್ಯ ಜೂನ್ 12 ರ ರಾತ್ರಿ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಹಲವಾರು ದೇವಾಲಯಗಳನ್ನು ಹಾಗೂ ವಿಗ್ರಹಗಳನ್ನು ನಿರ್ಮಿಸಿ ಆಚಾರ್ಯರು ಹೆಸರುವಾಸಿಯಾಗಿದ್ದರು.
ಮಂಗಳೂರಿನ ಪ್ರಸಿದ್ಧ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಶ್ರೀ ಕಾಳಿಕಾಂಬೆಯ ಶಿಲಾಮಯ ಗರ್ಭ ಗುಡಿಯ ನಿರ್ಮಾಣ ಮಾಡಿದ್ದರು. ಶಿಲ್ಪ ಕ್ಷೇತ್ರದಲ್ಲಿ ಇವರು ಸಲ್ಲಿಸಿದ ಅಮೂಲ್ಯ ಸೇವೆಗೆ ಅಮರಶಿಲ್ಪಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಅಲ್ಲದೇ ಹಲವಾರು ದೇವಸ್ಥಾನ, ಸಂಘ ಸಂಸ್ಥೆಯವರು ಇವರನ್ನು ಸನ್ಮಾನಿಸಿದ್ದರು.
ಮೃತರು ಪತ್ನಿ, ಓರ್ವ ಪುತ್ರಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.



