ಹೆಬ್ರಿ: ತಾಲೂಕಿನ ನಾಡ್ಪಾಲು ಗ್ರಾಮದ ಸೋಮೇಶ್ವರ ಅಭಯಾರಣ್ಯದ ಸೀತಾನದಿ ನೆಲ್ಲಿಕಟ್ಟೆ ತಿಂಗಳೆ ಪರಿಸರದಲ್ಲಿ ಮತ್ತೆ ಆನೆ ಸಂಚಾರ ಕಂಡುಬಂದಿದ್ದು, ಅಡಿಕೆ ಮತ್ತು ಬಾಳೆ ತೋಟಗಳಿಗೆ ಹಾನಿ ಉಂಟುಮಾಡಿದೆ.
ಕಳೆದ ನಾಲ್ಕು ದಿನಗಳಿಂದ ಈ ಪ್ರದೇಶದಲ್ಲಿ ಸಂಚರಿಸುತ್ತಿರುವ ಆನೆ, ಇದೀಗ ಕೆದ್ಲು ಮಕ್ಕಿ ಜಲಜ ಶೆಟ್ಟಿಯವರ ತೋಟಕ್ಕೆ ನುಗ್ಗಿ ಅಡಿಕೆ ಹಾಗೂ ಬಾಳೆ ಧ್ವಂಸಗೊಳಿಸಿದೆ. ಕಳೆದ ವರ್ಷವೂ ಇದೇ ತೋಟಕ್ಕೆ ನುಗ್ಗಿ ಅಪಾರ ಹಾನಿ ಉಂಟುಮಾಡಿತ್ತು.

ದಿನಂಪ್ರತಿ ಅರಣ್ಯ ಇಲಾಖೆ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರೂ ಆನೆ ಸಿಕ್ಕಿಲ್ಲ. ಹಗಲು ಕಾಡಿನಲ್ಲಿ ಇರುತ್ತದೆ, ರಾತ್ರಿ ತೋಟಗಳಿಗೆ ನುಗ್ಗಿ ಹಾನಿ ಮಾಡುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.



