Breaking
8 Jul 2025, Tue

ಉಜಿರೆ : ಅನುಗ್ರಹ ವಿದ್ಯಾ ಸಂಸ್ಥೆಯಲ್ಲಿ ಪಾಲಕರ ಹಬ್ಬದ ಆಚರಣೆ

ಬೆಳ್ತಂಗಡಿ: ಉಜಿರೆಯ ಅನುಗ್ರಹ ವಿದ್ಯಾಸಂಸ್ಥೆಯಲ್ಲಿ ಪಾಲಕರ ಹಬ್ಬದ ಆಚರಣೆಯು ಅತ್ಯಂತ ಶ್ರದ್ದಾಭಕ್ತಿಯಿಂದ ನಡೆಯಿತು.

ಬಲಿಪೂಜೆಯ ನೇತೃತ್ವವನ್ನು ಹೋಲಿ ರೆಡಿಮರ್ ಶಾಲೆಯ ಪ್ರಾಂಶುಪಾಲರಾದ ಫಾ! ಕ್ಲಿಪರ್ಡ್ ಪಿಂಟೊ ರವರು ವಹಿಸಿದ್ದರು. ಅವರು ತಮ್ಮ ಪ್ರಭೋಧನೆಯಲ್ಲಿ ಸಂತ ಅಂತೋಣಿಯವರ ಜೀವನ ಮೌಲ್ಯಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂಬ ನೈತಿಕ ಉಪದೇಶವನ್ನು ನೀಡಿದರು.

ಬಲಿಪೂಜೆಯಲ್ಲಿ ಸಂಚಾಲಕರಾದ ಫಾ! ಅಬೆಲ್ ಲೋಬೊ, ಪ್ರಾಂಶುಪಾಲರಾದ ಫಾ!ವಿಜಯ್ ಲೋಬೊ ಹಾಗೂ ದಯಾಳ್ ಬಾಗ್ನ ಫಾ! ದೀಪಕ್ ಫೆರ್ನಾಂಡಿಸ್ ಸಹಕರಿಸಿದರು. ಕಾರ್ಯಕ್ರಮದಲ್ಲಿ ಪಾಲನಾ ಮಂಡಳಿ ಉಪಾಧ್ಯಕ್ಷರಾದ ಶ್ರೀ ಆಂಟನಿ ಫೆರ್ನಾಂಡೀಸ್ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ತದನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಮಿಶೆಲ್ ಪಿಂಟೋ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

Leave a Reply

Your email address will not be published. Required fields are marked *