Breaking
25 Sep 2026, Fri

ಆರ್‌ಎಸ್‌ಎಸ್‌ ಮುಖಂಡ, ಮಾಜಿ ಎಂಎಲ್ ಸಿ ಪ್ರೊ.ನರಹರಿ ವಿಧಿವಶ

ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡರಾಗಿದ್ದ, ವಿಧಾನ ಪರಿಷತ್‌ ನ ಮಾಜಿ ಸದಸ್ಯ ರಾಗಿದ್ದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಪ್ರೊ.ಕೃ.ನರಹರಿ(93 ) ಅವರು ಅ. 08 ರಂದು ನಿಧನರಾಗಿದ್ದಾರೆ.

ಪ್ರೊ.ಕೃ.ನರಹರಿ ಅವರು ಆರ್ ಎಸ್ ಎಸ್ ಕ್ಷೇತ್ರೀಯ ಕಾರ್ಯವಾಹರಾಗಿ, ರಾಷ್ಟ್ರೀಯ ಶೈಕ್ಷಿಕ ಮಹಾಸಂಘದ ಅಖಿಲ ಭಾರತೀಯ ಅಧ್ಯಕ್ಷರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ದಿ ಮಿಥಿಕ್ ಸೊಸೈಟಿಯ ಅಧ್ಯಕ್ಷರಾಗಿ ಸಮಾಜಮುಖಿ ಕೆಲಸಗಳಲ್ಲಿ ಗುರುತಿಸಿಕೊಂಡಿದ್ದರು. ತುರ್ತು ಪರಿಸ್ಥಿತಿ ವೇಳೆ ಹೋರಾಟಕ್ಕಿಳಿದು ಸೆರೆಮನೆವಾಸವನ್ನೂ ಅನುಭವಿಸಿದ್ದರು.

ನರಹರಿ ಅವರ ನಿಧನಕ್ಕೆ ಆರ್ ಎಸ್ ಎಸ್ ಪ್ರಮುಖರು, ಬಿಜೆಪಿ ನಾಯಕರು ತೀವ್ರ ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *