Breaking
9 May 2026, Sat

ಮಂಗಳೂರು : ಕಾನೂನು ಬಾಹಿರವಾಗಿ ಇ-ಸಿಗರೇಟ್ ಮಾರಾಟ : ಬರ್ಕೆ ಪೊಲೀಸರಿಂದ ದಿಢೀರ್ ದಾಳಿ : 9.72 ಲಕ್ಷ ಮೌಲ್ಯದ ವಸ್ತು ಜಪ್ತಿ

ಮಂಗಳೂರು: ಪರವಾನಿಗೆ ಪಡೆಯದೇ ಇ-ಸಿಗರೇಟ್, ಹುಕ್ಕಾ ಪರಿಕರಗಳು ಮತ್ತು ಭಾರತೀಯ ಹಾಗೂ ವಿದೇಶಿ ಸಿಗರೇಟ್‌ಗಳನ್ನು ಕಾನೂನುಬಾಹಿರವಾಗಿ ಮಾರಾಟ ಮತ್ತು ಸಂಗ್ರಹಿಸುತ್ತಿದ್ದ ಲಾಲ್‌ಬಾಗ್ ಕಾಂಪ್ಲೆಕ್ಸ್ ನ ಅಂಗಡಿಯೊಂದಕ್ಕೆ ಅ.07ರಂದು ಬರ್ಕೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ.

ಮಳಿಗೆಯಿಂದ ಪೊಲೀಸರು ವಿವಿಧ ಬ್ರ‍್ಯಾಂಡ್‌ಗಳ 847 ಇ-ಸಿಗರೇಟ್‌ಗಳನ್ನು (4,43,125 ಮೌಲ್ಯ), 86 ಸಿಗರೇಟ್ ಪ್ಯಾಕ್‌ಗಳನ್ನು (5,09,120 ಮೌಲ್ಯ) ಮತ್ತು ಹುಕ್ಕಾ ಸಂಬಂಧಿತ ವಸ್ತುಗಳನ್ನು (20,500 ಅಂದಾಜು ಮೌಲ್ಯ) ಜಪ್ತಿ ಮಾಡಿದ್ದು ಒಟ್ಟು 9,72,745 ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ಧಾರೆ.

ಈ ವಸ್ತುಗಳನ್ನು ವಿಶೇಷವಾಗಿ ಯುವಕರಿಗೆ, ಸಾರ್ವಜನಿಕರಿಗೆ ಸರಬರಾಜು ಮಾಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.

ಈ ಕುರಿತು ಅಂಗಡಿ ಮಾಲೀಕ ಶಿವು ದೇಶಕೋಡಿ, ಕುದ್ರೋಳಿ ನಿವಾಸಿ ಇಬ್ರಾಹಿಂ ಇರ್ಷಾದ್ (33) ಮತ್ತು ಬಂಟ್ವಾಳ ನಿವಾಸಿ ಸಂತೋಷ್ (32) ಅವರ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *