Breaking
22 Mar 2026, Sun

ಕೆಂಪು ಕಲ್ಲಿನ ಮೇಲೆ ಸರ್ಕಾರ ವಿಧಿಸಿರುವ ಕಠಿಣ ನಿಯಮ: ಸಾಮಾಜಿಕ ಕಾರ್ಯಕರ್ತ ಧನ್ಯಕುಮಾರ್ ಬೆಳಂದೂರು ಅಕ್ರೋಶ, ಬಹಿರಂಗ ಪತ್ರ ಬಿಡುಗಡೆ

ಪುತ್ತೂರು: ಕೆಂಪು ಕಲ್ಲಿನ ಮೇಲೆ ಸರ್ಕಾರ ವಿಧಿಸಿರುವ ಕಠಿಣ ಆದೇಶದ ವಿರುದ್ಧ ಸಾಮಾಜಿಕ ಕಾರ್ಯಕರ್ತ ಧನ್ಯಕುಮಾರ್ ಬೆಳಂದೂರು ಅಕ್ರೋಶ ವ್ಯಕ್ತಪಡಿಸಿದ್ದು ಈ ಕುರಿತು ಬಹಿರಂಗ ಪತ್ರವೊಂದನ್ನು ಅವರು ಬಿಡುಗಡೆ ಮಾಡಿದ್ದಾರೆ.

ಕಲ್ಲು ಮತ್ತು ಹೊಯಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಗೂ ನೆರೆಯ ಜಿಲ್ಲೆಗಳಿಗೆ ಪ್ರತಿಯೊಬ್ಬರೀಗೂ ಅತೀ ಮುಖ್ಯವಾಗಿ ಬೇಕಾಗಿರುವಂತಹುದು. ಆದರೆ ಇದರ ಬಗ್ಗೆ ಯಾವ ಪಕ್ಷದ ಪ್ರತಿನಿಧಿಗಳು ಯಾಕೆ ದ್ವನಿ ಎತ್ತುತ್ತಿಲ್ಲ…..? ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಕೆಂಪು ಕಲ್ಲು ಅಂದ್ರೆ ಜಂಬು ಇಟ್ಟಿಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪ್ರತೀ ರಾಜಕಾರಣಿಗಳ ಮನೆಗೆ ಸರ್ಕಾರಿ ಕಟ್ಟಡಗಳಿಗೆ, ದೇವಸ್ಥಾನ, ಚರ್ಚ್, ಮಸೀದಿಗೆ ಹಾಗೂ ಸಾರ್ವಜನಿಕ ಬಡ ಕುಟುಂಬದವರಿಗೂ ಒಂದು ಮನೆ ನಿರ್ಮಿಸಲು ಬೇಕಾಗಿರುವ ಅಗತ್ಯ ವಸ್ತು ಆದರೆ ಇದಕ್ಕೆ ಯಾಕೆ ಇಷ್ಟು ಕಠಿಣ ಕಾನೂನು ರೂಲ್ಸ್…..?

ಈ ಪ್ರಕರಣದ ಪರಿಣಾಮವಾಗಿ ಸುಮಾರು 25,000 – 30,000 ಕಾರ್ಮಿಕರು, ಲಾರಿ ಚಾಲಕರು, ಲೋಡಿಂಗ್ ಹೆಲ್ಪರ್ ಗಳು, ಮೆಸ್ಟ್ರಿ, ಪೈಂಟರ್, ಸೆಂಟ್ರಿಂಗ್ ಕಾರ್ಮಿಕರು ಜೀವನ ನಡೆಸಲು ಅಸಾಧ್ಯವಾದ ಸ್ಥಿತಿಗೆ ತಲುಪಿದ್ದಾರೆ ಎಂದು ಹೇಳಿದ್ದಾರೆ.

ಪತ್ರದ ಕೊನೆಯಲ್ಲಿ ಕೆಂಪು ಕಲ್ಲು ಮತ್ತು ಹೊಯಿಗೆಗಳ ಲೈಸೆನ್ಸ್ ಮತ್ತು ಅನುಮತಿಯ ಪ್ರಕ್ರಿಯೆಯನ್ನು ಸರಳಗೊಳಿಸಿ, ಸಾಮಾನ್ಯ ಜನರಿಗೂ ಕೈಗೆಟುಕುವ ದರದಲ್ಲಿ ಕೆಂಪು ಕಲ್ಲು ಲಭ್ಯವಾಗುವಂತೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *