Breaking
22 Mar 2026, Sun

ಕಡಬ : ಅಕ್ರಮ ಕೋಳಿ ಅಂಕ ಕ್ಕೆ ಪೊಲೀಸರ ದಾಳಿ : 6 ಬೈಕ್, 2 ಕಾರು ಸಹಿತ ಮೂವರು ವಶಕ್ಕೆ

ಕಡಬ : ತಾಲೂಕಿನ ನೇರಂಕಿ ಎಂಬಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿಟ್ಟುನಡೆಯುತ್ತಿದ್ದ ಕೋಳಿ ಅಂಕಕ್ಕೆ ಕಡಬ ಪೊಲೀಸರು ದಾಳಿ ನಡೆಸಿದ್ದಾರೆ.

ಅಂಕ ನಡೆಯುತ್ತಿದ್ದ ಬಗ್ಗೆ ಮಾಹಿತಿ ಖಚಿತ ಮಾಹಿತಿ ಪಡೆದ ಕಡಬ ಪೊಲೀಸ್ ಠಾಣಾ ಪೋಲಿಸ್ ಉಪನಿರೀಕ್ಷಕರಾದ ಅಭಿನಂದನ್ ರವರು ಠಾಣಾ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದಾರೆ.

ಆ ವೇಳೆ ದಾಳಿಯಲ್ಲಿ 8 ಮಂದಿ ಪರಾರಿಯಾಗಿದ್ದು, 3 ಮಂದಿಯನ್ನು ಬಂಧಿಸಿದ್ದಾರೆ.

ಸ್ಥಳದಲ್ಲಿದ್ದ 6 ಬೈಕ್, 2 ಕಾರು, 4 ಕೋಳಿ, ಕೋಳಿ ಅಂಕಕ್ಕೆ ಬಳಸಲಾಗುವ ಕತ್ತಿ ಹಾಗೂ ನಗದು ಹಣ 3,560 ರೂ ವಶಕ್ಕೆ ಪಡೆದುಕೊಂಡು ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ :44/2025 ಕಲಂ: 87, 93 KP Act ಹಾಗೂ 3,11 THE PREVENTION OF CRUELTY TO ANIMALS ACT, 1960 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *