ಕಾರ್ಕಳ: ಕಂಬಳ ಕ್ಷೇತ್ರದಲ್ಲಿ ಛಾಪನ್ನು ಮೂಡಿಸಿದ ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ್ ಶೆಟ್ಟಿಯವರ ಐದು ವರ್ಷದ ಚಿಂಕ್ರ ಎಂಬ ಕೋಣ ಜ್ವರದಿಂದ ಸಾವನ್ನಪ್ಪಿರುವ ಘಟನೆ ಜೂನ್ 10 ರ ಮಂಗಳವಾರ ರಾತ್ರಿ ನಡೆದಿದೆ.

ಈ ಕೋಣವು ತನ್ನ ಮಾಲಕರಾದ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ್ ಶೆಟ್ಟಿಯವರೊಂದಿಗೆ ಶೇಕ್ ಹ್ಯಾಂಡ್ ಕೊಡುವ ವೀಡಿಯೋ ವೈರಲ್ ಆಗಿ ಗಮನ ಸೆಳೆದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

ಕಾರ್ಕಳದ ಮುಖೇಶ ಕೋಣದ ಜತೆಗೆ ಜೂನಿಯರ್ ಹಗ್ಗ ವಿಭಾಗದಲ್ಲಿ ಮೊದಲ ಪದಕಗಳನ್ನು ಗೆದ್ದಿದ್ದು ಮಾತ್ರವಲ್ಲದೆ ಹಲವು ಕಂಬಳ ಕೂಟದಲ್ಲಿ ಪದಕಗಳನ್ನು ಮುಡಿಗೇರಿಸಿಕೊಂಡಿದೆ.ಇತ್ತಿಚೆಗೆ ಮುಕ್ತಾಯಗೊಂಡ ಕಂಬಳ ಸೀಸನ್ ನಲ್ಲೂ ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು.



