ಕಾಸರಗೋಡು: ಕಾರೊಂದು ಢಿಕ್ಕಿ ಹೊಡೆದು ಪಾದಚಾರಿಯೊಬ್ಬರು ಮೃತಪಟ್ಟ ಘಟನೆ ಕಾಸರಗೋಡು ಸಮೀಪದ ಮಂಜೇಶ್ವರದಲ್ಲಿ ಜೂ.9 ರಂದು ನಡೆದಿದೆ.
ವಾಮಂಜೂರು ಕಜೆ ನಿವಾಸಿಯಾಗಿರುವ ಮುಹಮ್ಮದ್ ಸಾದಿಕ್(40) ಮೃತ ದುರ್ದೈವಿಯಾಗಿದ್ದಾರೆ.

ಸೋಮವಾರ ರಾತ್ರಿ ವೇಳೆ ಮಂಜೇಶ್ವರ ಹೊಸಬೆಟ್ಟು ಎಂಬಲ್ಲಿ ಈ ಅಪಘಾತ ಸಂಭವಿಸಿದೆ. ಈ ವೇಳೆ ಗಂಭೀರ ಗಾಯಗೊಂಡಿದ್ದ ಸಾದಿಕ್ ರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಿದ್ರು ಜೀವ ಉಳಿಸಲಾಗಲಿಲ್ಲ ಎಂದು ತಿಳಿದು ಬಂದಿದೆ.



