Breaking
22 Mar 2026, Sun

ಪಣಂಬೂರಿನಲ್ಲಿ ದ್ವಿಚಕ್ರ ವಾಹನಕ್ಕೆ ಸಿಲುಕಿ ಸಹಸವಾರ ಸಾವು, ಸವಾರ ಗಂಭೀರ

ಮಂಗಳೂರು: ದ್ವಿಚಕ್ರ ವಾಹನಕ್ಕೆ ಟ್ಯಾಂಕರ್ ಢಿಕ್ಕಿಯಾಗಿ ಸಹಸವಾರ ಟ್ಯಾಂಕರ್ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದು ಇನ್ನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳೂರಿನ ಪಣಂಬೂರು ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಬಳಿ ಜೂ.9 ರ ರಾತ್ರಿಯ ವೇಳೆ ನಡೆದಿದೆ.

ಸುರತ್ಕಲ್ ಕಾನ ಜನತಾ ಕಾಲನಿ ನಿವಾಸಿ ಅಶ್ರಫ್ ಮೃತಪಟ್ಟ ದುರ್ದೈವಿಯಾಗಿದ್ದಾರೆ.

ಸವಾರ ಮುಲ್ಕಿ ಕೊಲ್ನಾಡು ನಿವಾಸಿ ಮುಹಮ್ಮದ್ ಶರೀಫ್ ಗಾಯಗೊಂಡಿದ್ದು, ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಅಶ್ರಫ್ ಮತ್ತು ಶರೀಫ್ ಅವರು ಮಂಗಳೂರು ಕಡೆಯಿಂದ ಸುರತ್ಕಲ್ ಕಡೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು.

ಈ ಸಂದರ್ಭ ಹಾಸನದಿಂದ ಸುರತ್ಕಲ್ ಎಚ್ಪಿಸಿಎಲ್ಗೆ ಗ್ಯಾಸ್ ತುಂಬಲು ಹೋಗುತ್ತಿದ್ದ ಬುಲೆಟ್ ಟ್ಯಾಂಕರ್ನ ಪಾಶ್ವ ತಾಗಿದೆ ಎನ್ನಲಾಗಿದೆ.

ಈ ವೇಳೆ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಾಗಿ ಕುಳಿತಿದ್ದ ಅಶ್ರಫ್ ರಸ್ತೆಗೆ ಎಸೆಯಲ್ಪಟ್ಟು ಢಿಕ್ಕಿ ಹೊಡೆದ ಬುಲೆಟ್ ಟ್ಯಾಂಕರ್ ಹಿಂಬದಿ ಬಿದ್ದಿದ್ದಾರೆ.

ಈ ವೇಳೆ ಟ್ಯಾಂಕರ್ ಚಕ್ರ ಅವರ ಮೇಲೆಯೇ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯಿಂದ ಶರೀಫ್ ಅವರಿಗೆ ಕೈ, ಕಾಲು ಹಾಗೂ ಎದೆಯ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *