ಬೆಳ್ತಂಗಡಿ: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ ನಗದು ಕಳ್ಳತನ ನಡೆಸಿದ ಘಟನೆ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಸುಣ್ಣಲಡ್ಡ ಎಂಬಲ್ಲಿ ನಡೆದಿದೆ.
ಸುಣ್ಣಲಡ್ಡ ನಿವಾಸಿ ಆಸಿಫ್ ಎಂಬವರ ಮನೆಯಲ್ಲಿ ಸೋಮವಾರ ತಡರಾತ್ರಿ ಕಳ್ಳತನ ಪ್ರಕರಣ ನಡೆದಿದ್ದು, ಮನೆಗೆ ನುಗ್ಗಿದ ಕಳ್ಳರು ಗೋದ್ರೆಜ್ ನಲ್ಲಿಟ್ಟಿದ್ದ ದಾಖಲೆ ಪತ್ರ, ಬಟ್ಟೆ ಬರೆಗಳನ್ನು ಚೆಲ್ಲಾಪಿಲ್ಲಿಗೊಳಿಸಿ ನಗದು ಕಳ್ಳತನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಗೋದ್ರೇಜ್ ನ ಬಾಗಿಲು ತೆರೆಯುವ ಶಬ್ದ ಕೇಳಿ ಅಲ್ಲೇ ಮಲಗಿದ್ದ ಆಸಿಫ್ ಅವರಿಗೆ ಎಚ್ಚರವಾದಾಗ ಕಳ್ಳನು ಹಿಂದಿನ ಬಾಗಿಲಿನಿಂದ ಓಡಿ ಪರಾರಿಯಾಗಿದ್ದಾನೆ.
ತಕ್ಷಣ ಮನೆ ಮಾಲೀಕರು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಕರೀಮ್ ಮತ್ತು ಅರ್ಶದ್ ರವರಿಗೆ ಮಾಹಿತಿ ನೀಡಿ ಅವರು ರಾತ್ರಿಯೇ ಬಂದು ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದರು.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.



