Breaking
6 May 2026, Wed

ಮುಡಾರಿನಲ್ಲಿ ಪಾದಾಚಾರಿಗೆ ಬೈಕ್ ಡಿಕ್ಕಿ- ಆಸ್ಪತ್ರೆಗೆ ದಾಖಲು

ಕಾರ್ಕಳ: ಬೈಕ್ವೊಂದು ಪಾದಾಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಪಾದಾಚಾರಿ ಆಸ್ಪತ್ರೆಗೆ ದಾಖಲಾದ ಘಟನೆ ಕಾರ್ಕಳ ತಾಲೂಕಿನ ಮುಡಾರಿನಲ್ಲಿ ಜೂ.8 ರ ರಾತ್ರಿ ವೇಳೆ ನಡೆದಿದೆ.

ಮುಡಾರು ನಿವಾಸಿ ಸುರೇಂದ್ರ (42), ಬೈಕ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಪಾದಾಚಾರಿಯಾಗಿದ್ದಾರೆ.

ಸುರೇಂದ್ರ ಅವರು ಮನೆ ಬಳಿ ರಸ್ತೆಯಲ್ಲಿ ನಿಂತಿರುವಾಗ ಕೆರ್ವಾಶೆ ಕಡೆಗೆ ಬೈಕ್ ಚಲಾಯಿಸಿಕೊಂಡು ಬಂದ ವಿಶ್ವನಂದನ ಎಂಬವರು ಡಿಕ್ಕಿ ಹೊಡೆದ ಪರಿಣಾಮ ಸುರೇಂದ್ರರವರ ಎಡ ಕಾಲಿನ ಮೊಣಗಂಟಿನ ಕೆಳಗೆ ಒಳ ಜಖಂ ಆಗಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ.

ಬೈಕ್ ಸವಾರ ವಿಶ್ವನಂದನ ಅವರು ಬೈಕ್ ಸಮೇತ ರಸ್ತೆಗೆ ಬಿದ್ದು ಅವರ ಮುಖ ಮತ್ತು ಕಾಲಿಗೆ ತರಚಿದ ಗಾಯಗಳು ಆಗಿವೆ ಎಂದು ತಿಳಿದು ಬಂದಿದೆ.

ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *