Breaking
22 Mar 2026, Sun

ಸುಳ್ಯದ ಹರಿಹರ ಪಳ್ಳತ್ತಡ್ಕದಲ್ಲಿ ತೋಟಕ್ಕೆ ಲಗ್ಗೆಯಿಟ್ಟು ಕೃಷಿ ಹಾನಿ ಮಾಡಿದ ಕಾಡಾನೆ

ಸುಳ್ಯ: ಕಾಡಾನೆಯೊಂದು ತೋಟಕ್ಕೆ ಲಗ್ಗೆಯಿಟ್ಟ ಘಟನೆ ಸುಳ್ಯ ತಾಲೂಕಿನ ಹರಿಹರ ಪಳ್ಳತ್ತಡ್ಕದಲ್ಲಿ ಜೂ.7ರ ರಾತ್ರಿ ನಡೆದಿದೆ.

ಹರಿಹರ ಪಳ್ಳತ್ತಡ್ಕ ಗ್ರಾಮದ ನಿವಾಸಿಯಾಗಿರುವ ಭೀಮಗುಳಿ ಪುಟ್ಟಣ್ಣ ಗೌಡ ಅವರ ತೋಟಕ್ಕೆ ಕಾಡಾನೆ ದಾಳಿ ಮಾಡಿದ್ದು ಅಡಿಕೆ, ಬಾಳೆ ಕೃಷಿಗೆ ಹಾನಿ ಮಾಡಿದೆ ಎಂದು ತಿಳಿದು ಬಂದಿದೆ.

ಇದೇ ವೇಳೆ ಆನೆಯು ಮನೆ ಸಮೀಪದಲ್ಲಿದ್ದ ಅಡಿಕೆ ಮರವನ್ನು ತಳ್ಳಿದಾಗ ಅದು ಮನೆಯ ಮೇಲೆ ಬಿದ್ದು ಮೇಲ್ಛಾವಣಿಗೆ ಹಾನಿ ಸಂಭವಿಸಿದೆ.

ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *