ಬೆಳ್ತಂಗಡಿ: ಬೊಲೆರೋ ವಾಹನವೊಂದು ಪಲ್ಟಿಯಾಗಿ ಚರಂಡಿಗೆ ಬಿದ್ದು ಸಿಲುಕಿ ವಾಹನದಲ್ಲಿದ್ದ ಇಬ್ಬರೂ ವ್ಯಕ್ತಿಗಳು ಅಪಾಯದಿಂದ ಪಾರಾದ ಘಟನೆ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಬೀಟಿಗೆಯ ಹೆದ್ದಾರಿಯಲ್ಲಿ ಜೂ.8 ರಂದು ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ನಿವಾಸಿಗಳಾದ ಚೇತನ್ ಮತ್ತು ಸುರೇಶ್ ಎಂಬವರು ಪ್ರಾಣಾಪಾಯದಿಂದ ಪಾರಾದ ವ್ಯಕ್ತಿಗಳು

ಇವರು ಕಾರ್ಕಳದ ಸಂಬಂಧಿಕರ ಮನೆಗೆ ಹೋಗಿ ಮೂಡಿಗೆರೆಗೆ ವಾಪಸ್ ಬರುವಾಗ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಬೀಟಿಗೆ ಹೆದ್ದಾರಿಯಲ್ಲಿ ನಾಯಿ ಅಡ್ಡ ಬಂದಿದೆ.
ಪರಿಣಾಮ ನಿಯಂತ್ರಣ ತಪ್ಪಿದ ಬೊಲೆರೋ ಪಲ್ಟಿಯಾಗಿ ರಸ್ತೆಯ ಬದಿಯ ಕ್ರಾಂಕ್ರಿಟ್ ಚರಂಡಿಗೆ ಬಿದ್ದು ಸಿಲುಕಿಕೊಂಡಿದೆ.

ವಾಹನ ಪಲ್ಟಿಯಾದ ರಭಸಕ್ಕೆ ಅದರಲಿದ್ದ ಚೇತನ್ ಮತ್ತು ಸುರೇಶ್ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಈ ವೇಳೆ ಸ್ಥಳೀಯ ಯುವಕರ ತಂಡ ಸೇರಿಕೊಂಡು ಬೊಲೆರೋ ವಾಹನವನ್ನು ಹೊರತೆಗೆಯಲು ಸಹಕರಿಸಿದ್ದಾರೆ ಎಂದು ತಿಳಿದು ಬಂದಿದೆ.


