Breaking
22 Jun 2025, Sun

ಪಾಣೆಮಂಗಳೂರು : ಪ್ರಾಣಬಲಿಗಾಗಿ ಕಾಯುವಂತಿದೆ ಸೇತುವೆಯ ರಕ್ಷಣೆಗೆ ಹಾಕಿರುವ ತಡೆಬೇಲಿ!

ಬಂಟ್ವಾಳ: ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣಗೊಂಡು ಶತಮಾನ ಪೂರೈಸಿರುವ ಪಾಣೆಮಂಗಳೂರಿನ ಹಳೇಯ ಉಕ್ಕಿನ ಸೇತುವೆಯ ರಕ್ಷಣೆಗೆ ಹಾಕಿರುವ ತಡೆಬೇಲಿ ಪ್ರಾಣ ಬಲಿಗಾಗಿ ಕಾಯುವಂತಿದ್ದು ಅಧಿಕಾರಿಗಳು ಗಮನ ಹರಿಸದಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾಣೆಮಂಗಳೂರಿನ ಉಕ್ಕಿನ ಸೇತುವೆ 111 ವರ್ಷವನ್ನು ಪೂರೈಸಿದೆ. ಅವಿಭಜಿತ ದ.ಕ. ಜಿಲ್ಲೆಯ ಮೊದಲ ಸಂಪರ್ಕ ಸೇತುವೆ ಎನ್ನುವ ಹೆಗ್ಗಳಿಕೆಯೂ ಇದಕ್ಕಿದೆ. ಬ್ರಿಟಿಷ್ ಕಾಲದಲ್ಲಿ ನಿರ್ಮಾಣಗೊಂಡು ಇತಿಹಾಸದ ಕೊಂಡಿಯಾಗಿರುವ ಈ ಸೇತುವೆಯನ್ನು ಐತಿಹಾಸಿಕ ಸ್ಮಾರಕವಾಗಿ ರಕ್ಷಿಸಬೇಕು ಎನ್ನುವ ಬೇಡಿಕೆಯೂ ಇಲ್ಲಿನ ಜನರದ್ದು. ಈ ಸೇತುವೆಯಲ್ಲಿ ಘನವಾಹನಗಳ ಸಂಚಾರವನ್ನು ಜಿಲ್ಲಾಧಿಕಾರಿ ನಿಷೇಧಿಸಿದ್ದರೂ ಪಾಣೆಮಂಗಳೂರಿಗೆ ಸರಕು ಹೊತ್ತು ತರುತ್ತಿದ್ದ ಲಾರಿಗಳ ಸಂಚಾರ ನಿರಾತಂಕವಾಗಿ ಮುಂದುವರಿದಿತ್ತು. ಸೇತುವೆಯಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿಯೊಂದು ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡಿದ ಬಳಿಕ ಎಚ್ಚೆತ್ತುಕೊಂಡ ಬಂಟ್ವಾಳ ಪುರಸಭೆ ಸೇತುವೆಯ ಎರಡೂ ಪಾರ್ಶ್ವಗಳಲ್ಲಿ ತಡೆಬೇಲಿ ನಿರ್ಮಿಸಿ ಘನವಾಹನಗಳ ಸಂಚಾರವನ್ನು ನಿಷೇಧಿಸಿತು. ಆದರೆ ಕೆಲ ವಾಹನ ಚಾಲಕರು ತಡೆಬೇಲಿಯಲ್ಲೂ ಘನವಾಹನಗಳನ್ನು ನುಗ್ಗಿಸಿದ ಕಾರಣ ತಡೆಬೇಲಿ ಹಿಗ್ಗಿ ಸೇತುವೆಯ ರಕ್ಷಣೆಗಿದ್ದ ಬೇಲಿ ಕಮಾನಿನಂತಾಗಿ ನಿಷ್ಪçಯೋಜಕವಾಗಿದೆ. ಈಗ ಬುಡಸಮೇತ ಕಿತ್ತು ಬಂದಿದ್ದು ಅಪಾಯಕಾರಿಯಾಗಿ ವಾಲಿ ನಿಂತಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ಬೀಳುವ ಸಾಧ್ಯತೆ ಇದೆ.

ಅಪಾಯಕ್ಕೆ ಆಹ್ವಾನ: ಪಾಣೆಮಂಗಳೂರು, ನಂದಾವರ, ಸಜೀಪ. ಮತ್ತಿತರ ಭಾಗಗಳಿಂದ ಬರುವ ಜನರು ಈಗಲೂ ಪಾಣೆಮಂಗಳೂರು ಹಳೆಯ ಸೇತುವೆಯನ್ನೇ ಅವಲಂಬಿಸಿಕೊAಡಿದ್ದಾರೆ. ಲಘುವಾಹನಗಳ ಸಂಚಾರಕ್ಕೆ ಈಗಲೂ ಈ ಸೇತುವೆ ಸುರಕ್ಷಿತವಾಗಿದೆ. ಆದರೆ ಇಲ್ಲಿ ಕಳಪೆ ಗುಣಮಟ್ಟದ ತಡೆಬೇಲಿ ಹಾಕಿದ ಬಳಿಕ ಸೇತುವೆಯ ಮೇಲಿನ ಪ್ರಯಾಣ ಸುರಕ್ಷಿತವಾಗಿದೆ. ತಾಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಗಾಳಿ ಮಳೆ ಸುರಿಯುತ್ತಿದೆ, ದೊಡ್ಡ ದೊಡ್ಡ ಮರಗಲೇ ಗಾಳಿಗೆ ಬುಡಸಮೇತ ಉರುಳಿ ಬೀಳುವಾಗ ಬುಡಸಮೇತ ಕಿತ್ತು ಬಂದು ವಾಲಿ ನಿಂತ ತಡೆಬೇಲಿ ಉಳಿಯ ಬಹುದೇ ಎನ್ನುವುದು ಸಾರ್ವಜನಿಕರ ಪ್ರಶ್ನೆ. ಅಪಾಯ ಕಣ್ಣೆದುರಿಗೆ ಕಾಣುತ್ತಿದ್ದರೂ ತಡೆಬೇಲಿ ಬದಲಾಯಿಸದೇ ಅದನ್ನು ಏತಕ್ಕಾಗಿ ಇನ್ನೂ ಅಲ್ಲೇ ಉಳಿಸಿಕೊಂಡಿದ್ದಾರೆ ಎನ್ನುವ ಪ್ರಶ್ನೆಗೆ ಪುರಸಭೆಯ

ಅಧಿಕಾರಿಗಳು ಉತ್ತರಿಸಬೇಕಾಗಿದೆ.

ಅಸುರಕ್ಷಿತವಾಗಿರುವ ತಡೆಬೇಲಿಯನ್ನುತೆರವುಮಾಡುವ ಬಗ್ಗೆ ಪುರಸಭೆಯ ಅಧಿಕಾರಿಗಳಿಗೆ
ತಿಳಿಸಿದ್ದೇನೆ. ಇದಕ್ಕೆ ಸಂಬಂಧಪಟ್ಟ ಪತ್ರವ್ಯವಹಾರವನ್ನು ಮಾಡಲಾಗಿದೆ. ಈ ಬಗ್ಗೆ ಇಲ್ಲಿಗೆಭೇಟಿ ನೀಡಿರುವ ಜಿಲ್ಲಾ ಉಸ್ತುವಾರಿಕಾರ್ಯದರ್ಶಿಯವರ ಗಮನಕ್ಕೂ ತರಲಾಗಿದೆ. ಸಂಬಂಧಪಟ್ಟ ಇಂಜಿನಿಯರ್ ಜೊತೆ ಮಾತುಕತೆ ನಡೆಸಲಾಗುವುದು.

  • ಅರ್ಚನಾ ಡಿ. ಭಟ್, ತಹಸೀಲ್ದಾರ್ ಬಂಟ್ವಾಳ

Leave a Reply

Your email address will not be published. Required fields are marked *