Breaking
24 Sep 2026, Thu

SKSSF ನೆಹರುನಗರ ಶಾಖೆಯ ನೂತನ ಸಮಿತಿ ರಚನೆ

ಪಾಣೆಮಂಗಳೂರು: SKSSF ಪಾಣೆಮಂಗಳೂರು ನೆಹರುನಗರ ಶಾಖೆಯ 2026–2029ನೇ ಸಾಲಿನ ನೂತನ ಸಮಿತಿ ರಚನಾ ಕಾರ್ಯಕ್ರಮವು ಸೆ.20ರಂದು ಅಲ್ ಬದ್ರಿಯಾ ಮದರಸದಲ್ಲಿ ನಡೆಯಿತು.

ನೂತನ ಸಮಿತಿಯ ಅಧ್ಯಕ್ಷರಾಗಿ ಪಿ.ಎಸ್. ಲತೀಫ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಮಹಮ್ಮದ್ ಮೇಸ್ತ್ರಿ, ರಹಮಾನ್ ಕೀಳಂಗಡಿ ಹಾಗೂ ಮುಬಾರಕ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಬಶೀರ್, ಕೋಶಾಧಿಕಾರಿಯಾಗಿ ಮಹಮ್ಮದ್ ರಮೀಝ್, ಕಾರ್ಯದರ್ಶಿಯಾಗಿ ಮುಹಮ್ಮದ್ ರಿಝ್ವಾನ್ ಆಯ್ಕೆಯಾದರು.

ಜೊತೆ ಕಾರ್ಯದರ್ಶಿಗಳಾಗಿ ಮುಹಮ್ಮದ್ ಕಾಮಿಲ್, ಅರ್ಫಾಝ್ ಹಾಗೂ ಸುಹೈಲ್ ಆಯ್ಕೆಯಾಗಿದ್ದಾರೆ.

ಕಾರ್ಯಕ್ರಮದಲ್ಲಿ ಅನ್ವರ್ ಅಝ್ಝರಿ ಸ್ವಾಗತಿಸಿದರು. ಬದ್ರಿಯಾ ಜುಮಾ ಮಸೀದಿ ನೆಹರುನಗರದ ಖತೀಬ್ ದಾವೂದ್ ಇಸ್ಮಾಯಿಲ್ ಪೈಝಿ ದುಆ ನೆರವೇರಿಸಿ ಮಾತನಾಡಿದರು.

ನೂತನ ಸಮಿತಿಯು ಸಂಘಟನೆಯ ಆಶಯ ಹಾಗೂ ಧ್ಯೇಯಗಳನ್ನು ಮುಂದುವರಿಸಿಕೊಂಡು ಯುವ ಸಮುದಾಯದ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಸಂಘಟನೆಯ ಸೇವಾ ಚಟುವಟಿಕೆಗಳು ಸಮಾಜದ ಒಳಿತಿಗಾಗಿ ಮತ್ತಷ್ಟು ವಿಸ್ತರಿಸಲಿ ಎಂದು ಅವರು ಹಾರೈಸಿದರು.

Leave a Reply

Your email address will not be published. Required fields are marked *