ಮಣಿನಾಲ್ಕೂರು: ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನದ ಅನ್ನಪೂರ್ಣೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಅ.11ರಿಂದ 19ರವರೆಗೆ ನಡೆಯಲಿರುವ ವೈಭವದ ಶರನ್ನವರಾತ್ರಿ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರದಲ್ಲಿ ಭಕ್ತಿಪೂರ್ವಕವಾಗಿ ಬಿಡುಗಡೆಗೊಳಿಸಲಾಯಿತು.


ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ನವರಾತ್ರಿಯ ಒಂಬತ್ತು ದಿನಗಳ ಕಾಲ ಶ್ರೀ ಕ್ಷೇತ್ರದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಹಾಗೂ ವಿವಿಧ ಧಾರ್ಮಿಕ ವಿಧಿ-ವಿಧಾನಗಳು ನೆರವೇರಲಿವೆ. ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ಆಡಳಿತ ಸಮಿತಿ ಮನವಿ ಮಾಡಿದೆ.

ಆಮಂತ್ರಣ ಪತ್ರಿಕೆ ಬಿಡುಗಡೆ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಸುಧೀರ್ ಭಟ್, ಆಡಳಿತ ಟ್ರಸ್ಟಿ ಹಾಗೂ ಸಂಚಾಲಕ ಸಂಪತ್ ಕುಮಾರ್ ಶೆಟ್ಟಿ ಮುಂಡ್ರೇಲ್ ಗುತ್ತು, ಆಡಳಿತ ಟ್ರಸ್ಟಿಗಳಾದ ಲಿಂಗಪ್ಪ ಪೂಜಾರಿ ಕೆಂಚನಬೆಟ್ಟು, ಜಯ ನಾಯ್ಕ ನೇಲ್ಯಪಲ್ಕೆ, ಶಿವರಾಮ ಶೆಟ್ಟಿ ಅಂತರದೋಟ, ಪ್ರದೀಪ್ ಪೂಜಾರಿ ಕಟ್ಟದಡೆ, ವಿಶ್ವನಾಥ ಶೆಟ್ಟಿ ಸುಕ್ರೋಡಿ, ಅಶೋಕ್ ರೈ ಕೊಡಿಮಾರು, ಮಹಿಳಾ ಸಮಿತಿ ಅಧ್ಯಕ್ಷೆ ಜಯಂತಿ ಅಲ್ಲಂಗಾರು ಸೇರಿದಂತೆ ದೇವಸ್ಥಾನದ ಭಕ್ತರು, ಮಹಿಳಾ ಸಮಿತಿ ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.




