Breaking
22 Mar 2026, Sun

ಬೆಳ್ತಂಗಡಿಯ ಲಾಯಿಲದಲ್ಲಿ ಭೂ ಕುಸಿತ: ರಸ್ತೆ ಸಂಪರ್ಕ ಕಡಿತ

ಬೆಳ್ತಂಗಡಿ: ಭಾರೀ ಮಳೆಗೆ ಭೂ ಕುಸಿತವಾಗಿ ರಸ್ತೆಗೆ ಮಣ್ಣು ಕಲ್ಲುಗಳು ಬಿದ್ದು ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಲಾಯಿಲ ಅಂಕಾಜೆ ಸಮೀಪ ಪದ್ಲಾಡಿ ಅಗಲಿ ರಸ್ತೆಯ ಕೊಳಚಾವು ಎಂಬಲ್ಲಿ ಮೇ 30 ರಂದು ನಡೆದಿದೆ.

ಲಾಯಿಲ-ನಿನ್ನಿಕಲ್ಲು ಚಂದ್ಕೂರು ರಸ್ತೆಯಲ್ಲಿ ಬಂಡೆಕಲ್ಲು ಸಮೇತ ಗುಡ್ಡ ಕುಸಿದು ರಸ್ತೆಗೆ ಬಿದ್ದಿದ್ದು ಸಂಪರ್ಕ ಕಡಿತಗೊಂಡಿದೆ ಎಂಬ ಮಾಹಿತಿ ಇದೆ.

ಘಟನೆ ಬಗ್ಗೆ ಗ್ರಾಮ ಪಂಚಾಯತಿಗೆ ಸಾರ್ವಜನಿಕರು ಮಾಹಿತಿ ನೀಡಿದ್ದು, ಮಣ್ಣು ತೆರವುಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Leave a Reply

Your email address will not be published. Required fields are marked *