ಬಂಟ್ವಾಳ: ಚಾಲಕನ ನಿಯಂತ್ರಣ ಕಳೆದುಕೊಂಡು ಲಾರಿಯೊಂದು ಪಲ್ಟಿಯಾಗಿ ಕಾರ್ಮಿಕ ಮೃತಪಟ್ಟ ಘಟನೆ ಬಂಟ್ವಾಳದಲ್ಲಿ ಮೇ 30 ರಂದು ನಡೆದಿದೆ.
ಜಾರ್ಖಾಂಡ್ ಮೂಲದ ನಿರ್ಮಲಾ ಅನ್ಸ್ತಾ (32) ಮೃತ ಕಾರ್ಮಿಕನಾಗಿದ್ದಾನೆ. ಲಾರಿ ಚಾಲಕ ಸುಜಿತ್ ಮತ್ತು ಕ್ಲೀನರ್ ಸಿಮೋಹನ್ ಮುರ್ಮ ಅಪಾಯದಿಂದ ಪಾರಾಗಿದ್ದಾರೆ.

ಬೆಳಗ್ಗೆ ಉಡುಪಿಯಲ್ಲಿ ಅಕ್ಕಿ ಲೋಡ್ ಮಾಡಿಕೊಂಡು ಮೂಡಬಿದಿರೆಯಾಗಿ ಬಂಟ್ವಾಳಕ್ಕೆ ಬರುವಾಗ ತಾಲೂಕಿನ ಎಸ್ವಿ.ಎಸ್.ಕಾಲೇಜು ಬಳಿ ಮಳೆಗೆ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ ಎನ್ನಲಾಗಿದೆ.

ಈ ವೇಳೆ ಲಾರಿಯ ಹಿಂಬಾಗದಲ್ಲಿ ಕುಳಿತುಕೊಂಡಿದ್ದ ಕಾರ್ಮಿಕ ನಿರ್ಮಲಾ ಅನ್ಸ್ತಾ ಲಾರಿ ಪಲ್ಟಿಯಾದ ವೇಳೆ ರಸ್ತೆಗೆ ಎಸೆಯಲ್ಟಟ್ಟು ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಬಂಟ್ವಾಳ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


