Breaking
22 Sep 2026, Tue

ಚಲಿಸುತ್ತಿದ್ದ ಕಾರು ಬೆಂಕಿಗೆ ಆಹುತಿ : ಮಹಿಳಾ ಚಾಲಕಿ ಪ್ರಾಣಾಪಾಯದಿಂದ ಪಾರು

ಮಂಗಳೂರು: ಚಲಿಸುತ್ತಿದ್ದ ಕಾರೊಂದು ಬೆಂಕಿಗೆ ಆಹುತಿಯಾಗಿ ಮಹಿಳಾ ಚಾಲಕಿ ಪ್ರಾಣಾಪಾಯದಿಂದ ಪಾರಾದ ಘಟನೆ ಸುರತ್ಕಲ್ ಫ್ಲೈಓವರ್ ಬಳಿ ಮೇ 28ರಂದು ನಡೆದಿದೆ.

ಕಾರು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು,ಸದ್ಯ ಕಾರನ್ನು ಚಲಾಯಿಸುತ್ತಿದ್ದ ಮಹಿಳೆ ಸಕಾಲದಲ್ಲಿ ಬೆಂಕಿಯನ್ನು ಗಮನಿಸಿ ಸುರಕ್ಷಿತವಾಗಿ ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಾಥಮಿಕ ವರದಿಗಳ ಪ್ರಕಾರ ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣವಾಗಿರಬಹುದು ಎಂದು ತಿಳಿದುಬಂದಿದೆ.

ಸುರತ್ಕಲ್ ಪೊಲೀಸರ ತುರ್ತು ಕರೆಯ ಮೇರೆಗೆ, ಎಚ್‌ಪಿಸಿಎಲ್ ಮತ್ತು ರಾಜ್ಯ ಅಗ್ನಿಶಾಮಕ ಇಲಾಖೆಯ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *