Breaking
22 Mar 2026, Sun

ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ

ಹಾಸನ: ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ ಘಟನೆ ಹಾಸನ ತಾಲೂಕಿನ ಕೆಲವತ್ತಿ ಎಂಬ ಗ್ರಾಮದಲ್ಲಿ ನಡೆದಿದೆ.

ಕವನ ಹೃದಯಾಘಾತವಾಗಿ ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದಾಳೆ.

ಈಗಾಗಲೇ ಮೂರು ವಿಷಯಗಳ ಪರೀಕ್ಷೆ ಬರೆದಿದ್ದ ಕವನ ಇನ್ನೂ ಮೂರು ಪರೀಕ್ಷೆಗಳನ್ನು ಬರೆಯಬೇಕಿತ್ತು. ಅದಕ್ಕಾಗಿ ಆಕೆ ಸಿದ್ಥತೆಯನ್ನು ಮಾಡಿಕೊಂಡಿದ್ದಳು.

ಆದ್ರೆ ಸಂಜೆ ವೇಳೆ ಮನೆಗೆ ನೀರು ತಂದ ಕವನಾಗೆ ಎದೆನೋವು ಕಾಣಿಸಿಕೊಂಡಿದೆ.ಈ ವೇಳೆ ಈಕೆ ತಾಯಿಯ ಬಳಿ ಕುಡಿಯುವದಕ್ಕೆ ನೀರು ಕೇಳಿದ್ದಾಳೆ. ತಾಯಿ ನೀರು ತಂದು ಕೊಡುವಷ್ಟರಲ್ಲಿ ಮನೆಯಲ್ಲಿಯೇ ಕುಸಿದು ಬಿದ್ದಿದ್ದಳು.

ಕೂಡಲೇ ಆಕೆಯನ್ನು ಹಾಸನದ ಖಾಸಗಿ ಆಸ್ಪತ್ರೆಗೆ ಕರೆತರಲಾಗಿದ್ದು, ಅಷ್ಟರಲ್ಲಾಗಲೇ ಕೊನೆಯುಸಿರೆಳೆದಿದ್ದಾಳೆ.

Leave a Reply

Your email address will not be published. Required fields are marked *