Breaking
22 Mar 2026, Sun

ಬೆಳ್ತಂಗಡಿಯ ಕಾಯರ್ತಡ್ಕದಲ್ಲಿ ರಸ್ತೆ ಗುಂಡಿಗೆ ಸಿಲುಕಿದ ಬಸ್ ಮತ್ತು ಪಿಕಪ್

ಬೆಳ್ತಂಗಡಿ : ಬಸ್ ಮತ್ತು ಪಿಕಪ್ ವಾಹನವೊಂದು ರಸ್ತೆಯ ಬದಿಯ ಹೊಂಡದಲ್ಲಿ ಸಿಲುಕಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಕಾಯರ್ತಡ್ಕ . ಸಮೀಪದ ಮಿಯ್ಯಾರು ಎಂಬಲ್ಲಿ ಮೇ.27 ರಂದು ನಡೆದಿದೆ.

ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ ಅನ್ನುವ ಮಾಹಿತಿ ಲಭ್ಯವಾಗಿದೆ.

ವಿಪರೀತ ಸುರಿತಾ ಇರುವ ಮಳೆಯಿಂದಾಗಿ ರಸ್ತೆಯಲ್ಲಿ ಅಲ್ಲಲ್ಲಿ ಹೊಂಡಗಳು ನಿರ್ಮಾಣವಾಗಿದೆ. ಇದರಿಂದ ವಾಹನ ಸವಾರರು ಸಂಚಾರ ಮಾಡಲು ಪರದಾಟ ನಡೆಸುವ ಸ್ಥಿತಿ ಎದುರಾಗಿದೆ.

ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಮಾಧ್ಯಮಗಳ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *