ಕಡಬ : ಬೃಹತ್ ಮಾವಿನ ಮರವೊಂದು ನಿಲ್ಲಿಸಿದ್ದ ಕಾರಿನ ಮೇಲೆ ಬಿದ್ದ ಘಟನೆ ಕಡಬ ತಾಲೂಕಿನ ರಾಮಕುಂಜ ಗ್ರಾಮದ ಆತೂರು ಎಂಬಲ್ಲಿ ಮೇ.26 ರ ಸಂಜೆಯ ವೇಳೆ ನಡೆದಿದೆ.

ಸ್ಥಳೀಯ ನಿವಾಸಿಯಾಗಿರುವ ಅಬ್ದುಲ್ ಸಲೀಂ ಎಂಬವರು ರಾಮಕುಂಜದ ರಸ್ತೆ ಬದಿ ತನ್ನ ಮಾರುತಿ 800 ಕಾರನ್ನು ನಿಲ್ಲಿಸಿ ಹೊರ ಹೋಗಿದ್ದರು.

ಕಾರಿನೊಳಗೆ ರಹಿಮಾನ್, ಅಬ್ಬಾಸ್ ಹಾಗೂ ರಮ್ಲಾನ್ ಕುಳಿತಿದ್ದರು.

ಈ ವೇಳೆ ಮರ ಬೀಳುವ ಶಬ್ದ ಕೇಳಿ ಕಾರಿನಲ್ಲಿದ್ದ ಮೂವರು ದೂರ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ.


