ಕೊಲ್ಲಮೊಗ್ರು ಸಮೀಪದ ಕುರುಂಜಿ ವೆಂಕಟ್ರಮಣ ಗೌಡ ಅನುದಾನಿತ ಪ್ರೌಢಶಾಲೆಯ ಮೈದಾನ ಹಾಗೂ ಶಾಲಾ ಆವರಣದಲ್ಲಿ ಕೊಲ್ಲಮೊಗ್ರು ಚೈತನ್ಯ ಯುವತಿ ಮಂಡಲದ ವತಿಯಿಂದ ಸ್ವಚ್ಛತಾ ಕಾರ್ಯವನ್ನು ನಡೆಸಲಾಯಿತು.

ಈ ಸ್ವಚ್ಛತಾ ಕಾರ್ಯದಲ್ಲಿ ಮಂಡಲದ ಪದಾಧಿಕಾರಿಗಳಾದ ಶ್ರೀಮತಿ ನೀಲಾವತಿ ತಂಬಿನಡ್ಕ, ಶ್ರೀಮತಿ ರೀತಾ ಪಡಿಕಲ್ಲು, ಶ್ರೀಮತಿ ಸುನಂದ ಗಡಿಕಲ್ಲು, ಶ್ರೀಮತಿ ತಾರಾ ಕಲ್ಕೂದಿ ಹಾಗೂ ಶ್ರೀಮತಿ ಲತಾ ಕುಮಾರಿ ತಂಬಿನಡ್ಕ ಭಾಗವಹಿಸಿ ಶಾಲಾ ಮೈದಾನ ಮತ್ತು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಿದರು.

ಮಳೆಯ ಕಾರಣ ಶಾಲೆಗೆ ರಜೆ ಘೋಷಿಸಲಾಗಿದ್ದರೂ, ಉಪಹಾರ ವ್ಯವಸ್ಥೆಗಾಗಿ ಅಕ್ಷರ ದಾಸೋಹ ಸಿಬ್ಬಂದಿ ಶ್ರೀಮತಿ ದಿವ್ಯಾಕುಮಾರಿ ಸಹಕರಿಸಿದರು.

ಈ ಸಂದರ್ಭದಲ್ಲಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಸುರೇಶ್ ಕೆ.ಪಿ., ಸಹಶಿಕ್ಷಕರಾದ ಲೋಕನಾಥ್, ರಾಜೇಶ್ ಹಾಗೂ ಚಂದ್ರು ಉಪಸ್ಥಿತರಿದ್ದು, ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ ಚೈತನ್ಯ ಯುವತಿ ಮಂಡಲದ ಸದಸ್ಯರನ್ನು ಅಭಿನಂದಿಸಿದರು


